ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀಮಂತ ಮುಸ್ಲಿಂ ಮಹಿಳೆಯರು ಹಿಜಾಬ್ ಇಲ್ಲದೇ ಹೊರಹೋಗುತ್ತಾರೆ: ಶೋಭಾ ಕರಂದ್ಲಾಜೆ

ಮಣಿಪಾಲ: ಶಿಕ್ಷಣ ಮತ್ತು ಉದ್ಯೋಗಕ್ಕೆ ಯಾವುದೇ ಧರ್ಮ ಇಲ್ಲ. ದಯವಿಟ್ಟು ಹೆಣ್ಣುಮಕ್ಕಳು ಕಾಲೇಜಿಗೆ ಬನ್ನಿ. ಪರೀಕ್ಷೆ ಬರೆಯಿರಿ ಮತ್ತು ನಿಮ್ಮ ಕಾಲ ಮೇಲೆ ನಿಲ್ಲಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಹಿಜಾಬ್ ದಾರಿ ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದ್ದಾರೆ.

ಉಡುಪಿಯ ಮಣಿಪಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿಜಾಬ್ ವಿವಾದದ ಹಿಂದೆ ಯಾವುದೋ ಸಂಘಟನೆಗಳು ಪಿತೂರಿ ನಡೆಸಿವೆ. ಇದನ್ನು ಹೈಕೋರ್ಟ್ ಕೂಡ ಹೇಳಿದೆ. ನಾನು ಗಮನಿಸಿದ ಹಾಗೆ ಶ್ರೀಮಂತ ಹೆಣ್ಣುಮಕ್ಕಳು ಹಿಜಾಬ್ ಇಲ್ಲದೆಯೂ ಹೊರ ಹೋಗುತ್ತಾರೆ. ಆದರೆ ಬಡ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಯೇ ಹೊರ ಕಳಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇದಕ್ಕೆಲ್ಲ ಕಿವಿಕೊಡದೇ ಎಲ್ಲರೂ ಕಾಲೇಜಿಗೆ ಬರಬೇಕು ಎಂದು ಹೇಳಿದ್ದಾರೆ. ಕೋರ್ಟ್ ತೀರ್ಪಿನ ನಂತರವೂ ಸಂವಿಧಾನಕ್ಕೆ ಅಗೌರವ ತೋರಿಸುವುದನ್ನು ಗಮನಿಸಿದ್ದೇವೆ. ಇಂಥವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಚಿವರು ಹೇಳಿದರು.

Edited By : Manjunath H D
PublicNext

PublicNext

18/03/2022 12:54 pm

Cinque Terre

43.03 K

Cinque Terre

15

ಸಂಬಂಧಿತ ಸುದ್ದಿ