ಕುಂದಾಪುರ: ಆರು ಜನ ವಿದ್ಯಾರ್ಥಿನಿಯರ ಹೋರಾಟ ರಾಜ್ಯ- ರಾಷ್ಟ್ರಕ್ಕೆ ವ್ಯಾಪಿಸಿದೆ. ಸಮವಸ್ತ್ರ ನೀತಿ ಸಂಹಿತೆ ಎಲ್ಲ ಶಾಲಾ ಕಾಲೇಜುಗಳಲ್ಲೂ ಹಿಂದಿನಿಂದಲೂ ಇದೆ.ಹೈಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ಸಮವಸ್ತ್ರ ಪಾಲಿಸಲು ಸೂಚಿಸಲಾಗಿದೆ.
ಸಂವಿಧಾನಕ್ಕೆ ಕೋರ್ಟಿಗೆ ಈ ದೇಶಕ್ಕೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ಕೋರ್ಟ್ ವಿರುದ್ಧ ಯಾರೂ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು ,ಸಂವಿಧಾನಕ್ಕೆ ಗೌರವ ಕೊಟ್ಟು ಕೇಸರಿ ಹುಡುಗರು ಹೋರಾಟದಿಂದ ಹಿಂದೆ ಸರಿದಿದ್ದಾರೆ.
ಸಂವಿಧಾನದಲ್ಲಿ ನ್ಯಾಯ ಕೇಳುವವರು ಸಂವಿಧಾನದ ವಿರುದ್ಧ ನಡವಳಿಕೆ ಮಾಡುತ್ತಿರುವುದು ಸರಿಯಲ್ಲ.ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಕಲ್ಮಶಗಳೂ ಇಲ್ಲ.ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಕುಮ್ಮಕ್ಕು ಇದೆ.ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಿಯಮ ಮಾಡಲು ಸಾಧ್ಯ ಇಲ್ಲ ಎಂದು ಸಂಸದರು ಹೇಳಿದ್ದಾರೆ.
PublicNext
21/02/2022 05:39 pm