ಮಂಗಳೂರು: ʼಹಿಜಾಬ್ ವಿವಾದʼ ಬಿಜೆಪಿ ಸರ್ಕಾರ ಪ್ರಾಯೋಜಿತ. ಇದೀಗ ಕೋರ್ಟ್ ಮಧ್ಯಂತರ ಆದೇಶದಲ್ಲಿ ಸಮವಸ್ತ್ರ ನಿಯಮವಿರುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯ ಅಂತ ಹೇಳಿದೆ. ಆದರೆ, ಸರ್ಕಾರ ಹಾಗೂ ಜಿಲ್ಲಾಡಳಿತಗಳು, ಪೊಲೀಸ್ ಇಲಾಖೆ ಬಲ ಪ್ರಯೋಗ ಮಾಡಿ ವಿದ್ಯಾರ್ಥಿನಿಯರ, ಶಿಕ್ಷಕಿಯರ ಹಿಜಾಬ್ ಕಳಚುವ ಕೆಲಸ ಮಾಡ್ತಿದೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಗೃಹ- ಶಿಕ್ಷಣ ಇಲಾಖೆ ಕೋರ್ಟ್ ಆದೇಶವಷ್ಟೇ ಪಾಲಿಸಲಿ. ಅದನ್ನು ಬಿಟ್ಟು ಆದೇಶ ಅನ್ವಯವಾಗದ ಕಾಲೇಜುಗಳ ಮೇಲೆ ಹಿಜಾಬ್ ಹೇರಿಕೆ ಬೇಡ. ಹಾಗೆ ಮಾಡಿದ್ದಲ್ಲಿ ಶಿಕ್ಷಣಾಧಿಕಾರಿ ಮೇಲೆ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗುತ್ತದೆ ಎಂದರು.
ಕಾಂಗ್ರೆಸ್ ನೊಳಗೆ ಇಬ್ಭಾಗ ನೀತಿ ಇದೆ. ಹಿಜಾಬ್ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ. ಕಾಂಗ್ರೆಸ್ ಗೆ ಮುಸ್ಲಿಮರ ವೋಟ್ ಮಾತ್ರ ಬೇಕು. ಆದರೆ, ಅವರ ಸಮಸ್ಯೆ ಮಾತ್ರ ಬೇಡ. ಡಿ.ಕೆ.ಶಿವಕುಮಾರ್, ಮುಖಂಡರಿಗೆ ಹಿಜಾಬ್ ಬಗ್ಗೆ ಮಾತನಾಡದಂತೆ ನೋಟಿಸ್ ನೀಡುತ್ತಾರೆ. ಈ ಮೂಲಕ ಡಿಕೆಶಿ ಸಾಫ್ಟ್ ಹಿಂದುತ್ವ ಮೂಲಕ ತಮ್ಮ ಪಕ್ಷದ ಸಮಾಧಿ ತಾವೇ ತೋಡ್ತಿದಾರೆ ಎಂದರು.
ಎಸ್ ಡಿಪಿಐಗೆ ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟದ ರಾಜಕಾರಣ ಮಾಡುವಷ್ಟು ಗತಿಗೇಡು ಬಂದಿಲ್ಲ. ಈ ವಿಚಾರದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನ್ನು ಚರ್ಚೆಗೆ ಕರೆಯುತ್ತೇವೆ. ನಾವು ನಾಡಿನ ಜನರ ಸಂವಿಧಾನದ ಹಕ್ಕು ಉಳಿಸಲು ಹೋರಾಟ ಮಾಡುತ್ತೇವೆ. ನಾವು ಸಂವಿಧಾನದ ಪರ ಇರುವ ಪಕ್ಷ. ಬಿಜೆಪಿ- ಆರ್ ಎಸ್ ಎಸ್ ಸಂವಿಧಾನ ವಿರೋಧಿ ಪಕ್ಷ ಎಂದು ಅಬ್ದುಲ್ ಮಜೀದ್ ಹರಿಹಾಯ್ದರು.
Kshetra Samachara
17/02/2022 02:58 pm