ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಸಮವಸ್ತ್ರ ವಿಚಾರದಲ್ಲಿ ಸರಕಾರದ ನಿರ್ಧಾರ ಸ್ವಾಗತಾರ್ಹ"

ಉಡುಪಿ: ಸಮವಸ್ತ್ರ ವಿಚಾರದಲ್ಲಿ ಸರಕಾರಿ ಕಾಲೇಜು ಅಭಿವೃದ್ಧಿ ಸಮಿತಿ ರೂಪಿಸುವ ನಿಯಮವೇ ಅಂತಿಮ ಎಂದು ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಿಜಾಬ್ ವಿವಾದ ಹಿನ್ನೆಲೆಯಲ್ಕಿ ಸರಕಾರದ ಈ ಆದೇಶ ಮಹತ್ವ ಪಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್ , ಸರ್ಕಾರದ ಆದೇಶವನ್ನು ನಾವು ಸ್ವಾಗತಿಸುತ್ತೇವೆ.

ಸೋಮವಾರದಿಂದ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ.ಹಿಜಾಬ್ , ಕೇಸರಿ ಶಾಲು ಧರಿಸಿ ಕ್ಲಾಸಿಗೆ ಬರಬಾರದು.

ಸರಕಾರದ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ಸರಕಾರಿ ಕಾಲೇಜು ಅಭಿವೃದ್ಧಿ ಸಮಿತಿ ಮಾಡುವ ನಿಯಮವೇ ಅಂತಿಮ ಎಂದರು.

ಖಾಸಗಿ ಕಾಲೇಜಿನಲ್ಲೂ ಆಡಳಿತ ಮಂಡಳಿ ನಿಯಮ ಮಾಡಬಹುದು.ಹಿಂದೂ ವಿದ್ಯಾರ್ಥಿಗಳೂ ಕೇಸರಿ ಶಾಲು ಹಾಕುವಂತಿಲ್ಲ.

ಕಾನೂನು ವಿರುದ್ಧ ಹೋದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.ಶಿಕ್ಷಣ ಮಾತ್ರ ಬೇಕು ಎನ್ನುವವರಿಗೆ ಈ ಆದೇಶದಿಂದ ಒಳಿತಾಗಲಿದೆ ಎಂದು ಹೇಳಿದರು.

Edited By : Manjunath H D
PublicNext

PublicNext

05/02/2022 08:52 pm

Cinque Terre

67.37 K

Cinque Terre

9

ಸಂಬಂಧಿತ ಸುದ್ದಿ