ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಪಠ್ಯಪುಸ್ತಕ ಪರಿಷ್ಕರಣೆಯಿಂದ ರಾಜ್ಯ ಸರಕಾರ ಎಷ್ಟು ಕೆಳಮಟ್ಟಕ್ಕೆ ಇಳಿದಿದೆಯೆಂದು ತಿಳಿಯುತ್ತೆ'

ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಮೂಲಕ‌ ರಾಜ್ಯ ಸರಕಾರ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ. ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥಯನ್ನು ಪಠ್ಯಪುಸ್ತಕ ಸಮಿತಿಯಿಂದ ತೆಗೆದುಹಾಕುವ ಬದಲು ಉಳಿಸುವ ಪ್ರಯತ್ನ ಮಾಡುತ್ತಿರುವ ಬಿಜೆಪಿ ಸರಕಾರಕ್ಕೆ ಮರ್ಯಾದೆ ಇದೆಯೇ. ತಕ್ಷಣ ಈ ಪಠ್ಯಕ್ರಮವನ್ನು ರದ್ದುಗೊಳಿಸಲಿ ಎಂದು ಕರ್ನಾಟಕ ದಸಂಸ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಸರಕಾರ ಗೊಂದಲಮಯ ವಾತಾವರಣವನ್ನು ಸೃಷ್ಟಿದಸಿದೆ. ಈ ಹಿಂದೆ ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪಠ್ಯಪುಸ್ತಕ ಸಮಿತಿಯು ಇತಿಹಾಸಕ್ಕೆ, ಸಾಮಾಜಿಕ ನ್ಯಾಯಕ್ಕೆ ಚ್ಯುತಿ ಬಾರದಂತೆ ಪಠ್ಯಕ್ರಮವನ್ನು ಮಾಡಿದ್ದರು. ಸಿಬಿಎಸ್ ಸಿ ಪಠ್ಯಪುಸ್ತಕದಲ್ಲಿ ಬರಗೂರರ ಪಠ್ಯಕ್ರಮವೇ ಇದೆ. ಆದರೆ ರಾಜ್ಯಸರ್ಕಾರ ಬರಗೂರು ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕವನ್ನು ತಂದಿದೆ ಎಂದರೆ ಈ ಸರಕಾರ ಎಷ್ಟು ದಿಕ್ಕೆಟ್ಟು ಹೋಗಿದೆ ಎಂದು ಗಮನಿಸಬಹುದು. ಪಠ್ಯಪುಸ್ತಕ ಸಮಿತಿಯಲ್ಲಿ ಒಂದೇ ಸಮುದಾಯದ ಜನರಿದ್ದಾರೆ. ಪಠ್ಯದಲ್ಲೂ 10 ಜನರಲ್ಲಿ 9ಮಂದಿ ಒಂದೇ ಸಮುದಾಯದವರು ಬರೆದ ಪಠ್ಯವಿದೆ. ಅರವಿಂದ ಮಾಲಗತ್ತಿಯವರ ಪದ್ಯ ತೆಗೆದು ಚಕ್ರವರ್ತಿ ಸೂಲಿಬೆಲೆಯ ಪದ್ಯವನ್ನು ಪಾಠಕ್ಕೆ ಹಾಕಿದ್ದಾರೆ‌. ಸೂಲಿಬೆಲೆಯಿಂದ ಮಕ್ಕಳು ಕಲಿಯಲು ಏನಿದೆ. ಈ ಮೂಲಕ ಮಕ್ಕಳಿಗೆ ವಿಷವುಣಿಸುವ ಪಯತ್ನವಾಗುತ್ತಿದೆ ಎಂದರು.

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ರೈತ ಮುಖಂಡ ಟಿಕಾಯತ್ ಅವರ ಮೇಲೆ ನಿನ್ನೆ ಕೆಲವು ಕೋಮುವಾದಿಗಳು ಹಲ್ಲೆ ನಡೆಸಿದ್ದರು. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ರಾಜ್ಯವನ್ನು ಕೋಮುವಾದಿಗಳು ಅಶಾಂತಿಯ ತಾಣವಾಗಿಸಿದ್ದಾರೆ. ಆದ್ದರಿಂದ ಈ ದುಷ್ಕೃತ್ಯ ಎಸಗಿರುವವರ ಮೇಲೆ ತಕ್ಷಣ ಸರಕಾರ ಕ್ರಮ ಕೈಗೊಳ್ಳಬೇಕೆಂದು ಮಾವಳ್ಳಿ ಶಂಕರ್ ಆಗ್ರಹಿಸಿದರು.

Edited By :
Kshetra Samachara

Kshetra Samachara

31/05/2022 03:31 pm

Cinque Terre

5.49 K

Cinque Terre

0

ಸಂಬಂಧಿತ ಸುದ್ದಿ