ಉಡುಪಿ: ರಾಜ್ಯ ಸರಕಾರ ನಿನ್ನೆ ಸಂಕ್ರಾಂತಿ ಹಬ್ಬದಂದು ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿ ,ಹಬ್ಬಕ್ಕೆ ಸಿಹಿ ನೀಡಿದ್ದೇವೆ ಎಂದು ಹೇಳಿದೆ.ಆದರೆ ಸರಕಾರ ನಮ್ಮ ಮೂಗಿಗೆ ತುಪ್ಪ ಸವರಿ ನಮ್ಮನ್ನು ಸುಮ್ಮನಿರಿಸುವ ಪ್ರಯತ್ನ ಮಾಡಿದೆ ಎಂದು ಅತಿಥಿ ಉಪನ್ಯಾಸಕರು ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ನಾವು ಬಹಳ ದಿನಗಳಿಂದ ಸೇವಾ ಭದ್ರತೆ ಮತ್ತು ಖಾಯಮಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೆವು.ಆದರೆ ಸರಕಾರ 14500 ಅತಿಥಿ ಉಪನ್ಯಾಸಕರ ಪೈಕಿ ಕೆಲವೇ ಕೆಲವರ ವೇತನ ಹೆಚ್ಚಳ ಮಾಡಿದೆ.ಇದೊಂದು ರೀತಿ ಕಿರಿಯ ಉಪನ್ಯಾಸಕರ ದುಡ್ಡನ್ನು ತೆಗೆದು ಹಿರಿಯರಿಗೆ ನೀಡಿದ ಹಾಗೆ.ಇದು ಸರಕಾರದ ಅವೈಜ್ಞಾನಿಕ ನಿರ್ಧಾರ.ಇದನ್ನು ಸರಿಪಡಿಸದಿದ್ದರೆ ಮತ್ತೆ ಪ್ರತಿಭಟನೆ ಹಾದಿ ಹಿಡಿಯುತ್ತೇವೆ ಎಂದು ಸರಕಾರವನ್ಬು ತರಾಟೆಗೆ ತೆಗೆದುಕೊಂಡಿದ್ದಾರೆ.
Kshetra Samachara
15/01/2022 06:06 pm