ಕುಂದಾಪುರ: ಕೋಟೇಶ್ವರ ವಕ್ವಾಡಿ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಮತ್ತು ವಕ್ವಾಡಿ ಹಸ್ತಚಿತ್ತ ಫೌಂಡೇಶನ್ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ| ವಿ.ಕೆ ಐತಾಳ್ (ವಕ್ವಾಡಿ ಕೃಷ್ಣ ಐತಾಳ್) ಅವರ ಸ್ಮರಣಾರ್ಥ ಹರ್ ಘರ್ ತಿರಂಗಾ ಕಾರ್ಯಕ್ರಮದ ಉದ್ಘಾಟನೆ ಆ. 7ರಂದು ಸಂಜೆ ಇಲ್ಲಿನ ವಿಲೇಜ್ ಹೊಟೇಲ್ನಲ್ಲಿ ನಡೆಯಿತು.
ವಕ್ವಾಡಿ ಮೂಲದ ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ನಮ್ಮೂರ ಸ್ವಾತಂತ್ರ್ಯ ಹೋರಾಟಗಾರ ದಿ| ವಿ. ಕೆ. ಐತಾಳ್ ಅವರ ಸ್ಮರಣಾರ್ಥ ವಕ್ವಾಡಿಯ ಪ್ರತಿ ಮನೆಯಲ್ಲೂ ದೇಶದ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ತ್ರಿವರ್ಣ ಧ್ವಜ ಹಾರಿಸುವ ಸಲುವಾಗಿ ಹಮ್ಮಿಕೊಂಡ ಕಾರ್ಯಕ್ರಮ ದೇಶಭಕ್ತಿಯ ಸಂಕೇತ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ನೀಡಿದ ಕರೆಯನ್ನು ಗೌರವಿಸಿ ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರತಿಯೋರ್ವರಿಗೂ ಇದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ ವಕ್ವಾಡಿ ರಾಷ್ಟ್ರಧ್ವಜದ ಮಹತ್ವವಿವರಿಸಿ, ದಿ| ವಿ. ಐತಾಳರ ದೇಶಪ್ರೇಮದ ಬಗ್ಗೆ ತಿಳಿಸಿದರು. ಶಂಕರ ಮೂರ್ತಿ ಮಂಜ, ಲೀಲಾವತಿಯಮ್ಮ, ಕಾರ್ಯಕ್ರಮದ ಆಯೋಜಕ ದಿ| ವಿ. ಕೆ. ಐತಾಳ್ ಅವರ ಮಕ್ಕಳಾದ ಗಿರೀಶ್ ಐತಾಳ್, ಮಹೇಶ್ ಐತಾಳ್, ವಾಣಿ ಐತಾಳ್ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಪೂಜಾರಿ ವಕ್ವಾಡಿ ಹಾಗೂ ಕಾಳಾವರ ಗ್ರಾ.ಪಂ. ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಮಾತನಾಡಿದರು. ಅಕ್ಷತಾ ಗಿರೀಶ್ ಐತಾಳ್ ವಂದಿಸಿದರು. ನಾಗರತ್ನಾ ಹೇರಳೆ ನಿರೂಪಿಸಿದರು.
ಲೀಲಾವತಿ ಐತಾಳ್ ಕುಟುಂಬ, ಗಣೇಶೋತ್ಸವ ಸಮಿತಿ ವಕ್ವಾಡಿ, ಆಸರೆ ಟ್ರಸ್ಟ್ ವಕ್ವಾಡಿ, ವಕ್ವಾಡಿ ಫ್ರೆಂಡ್ಸ್, ಯುವಶಕ್ತಿ ಮಿತ್ರ ಮಂಡಳಿ, ಚಿತ್ತಾರಿ ನಾಗಬ್ರಹ್ಮ ರಕೇಶ್ವರೀ ಭಜನ ಮಂಡಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ವಕ್ವಾಡಿ ಹಾಗೂ ನವನಗರ, ವಿಶ್ವ ಬ್ರಾಹ್ಮಣ ಸಂಘ, ಹಾಲು ಉತ್ಪಾದಕರ ಸಂಘ, ದೇವರಾಡಿ ಫ್ರೆಂಡ್ಸ್ ವಕ್ವಾಡಿ ಸಹಕರಿಸಿದರು.
Kshetra Samachara
08/08/2022 01:10 pm