ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಗ್ರಾಮೀಣ ಪ್ರತಿಭೆ ರಂಜಿತಾ ನಮ್ಮ ಹೆಬ್ರಿ ತಾಲೂಕಿನ ಹೆಮ್ಮೆ: ತಹಶೀಲ್ದಾರ್ ಪುರಂದರ್

ಹೆಬ್ರಿ: ಹೆಬ್ರಿ ಸಾಧಕರ ನಾಡು, ಬಹುಮುಖ ಪ್ರತಿಭೆಗಳು ತೆರಯಮರೆಯಲ್ಲಿ ಇದ್ದಾರೆ. ಎಲ್ಲರಲ್ಲೂ ಸಾಧನೆ ಗೈದಿದ್ದಾರೆ.

ಆದರೆ ಯಾರೂ ವೈಯಕ್ತಿಕ ಪ್ರಚಾರ ಇಲ್ಲದೆ ತಮ್ಮ ಸೇವೆಯನ್ನು ಮಾಡುತ್ತಲೇ ಇರುತ್ತಾರೆ. ಹೆಬ್ರಿಯ ಮಂದಿಗೆ ನಾವು ಆಭಾರಿ, ಗ್ರಾಮೀಣ ಪ್ರತಿಭೆ ರಂಜಿತಾ ನಮ್ಮ ಹೆಬ್ರಿ ತಾಲೂಕಿನ ಹೆಮ್ಮೆ. ಅವರ ಸಾಧನೆ ಅತ್ಯಂತ ಖುಷಿಯಾಗಿದೆ. ಎಲ್ಲರ ಸಹಕಾರವೂ ದೊರೆಯುತ್ತದೆ. ನಮ್ಮ ಸಹಕಾರ ಕೂಡ ಇದೆ ಎಂದು ಹೆಬ್ರಿ ತಹಶೀಲ್ದಾರ್‌ ಪುರಂದರ್‌ ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಹೆಬ್ರಿಯ ಶೀಲಾ ಸುಭೋದ್‌ಬಲ್ಲಾಳ್‌ ಬಂಟರ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ, ಸಾಗುವಾನಿ ಮರದ ಹಲಗೆಯ ಮೇಲೆ 1400 ಮೊಳೆಯಲ್ಲಿ ವಿಶೇಷವಾದ 3 ಅಡಿ ಎತ್ತರದ ಗಣಪತಿಯ ಕಲಾಕೃತಿ ರಚಿಸಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ 2022 ರಲ್ಲಿ ದಾಖಲಿಸಿ ಸಾಧನೆ ಮಾಡಿದ ಹೆಬ್ರಿ ಗುಳಿಬೆಟ್ಟಿನ ರಂಜಿತಾ ದೇವಾಡಿಗ ಅವರಿಗೆ ಪ್ರಮಾಣಪತ್ರ ನೀಡಿ ಸಾರ್ವಜನಿಕ ಸನ್ಮಾನ ನೆರವೇರಿಸಿದರು.

ಉದ್ಯಮಿ ಯೋಗೀಶ ಭಟ್‌ ಅಭಿನಂದಿಸಿ ನಮ್ಮೂರಿಗೆ ಹೆಮ್ಮೆ ತಂದಿರುವ ರಂಜಿತಾ ದೇವಾಡಿಗ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.

ಸಾಧಕಿ ರಂಜಿತಾ ದೇವಾಡಿಗ ಮಾತನಾಡಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ರಂಜಿತಾ ಸಾಧನೆಗೆ ವಿಶೇಷ ಸಹಕಾರ ನೀಡಿದ ಹೆಬ್ರಿ ಎಪಿಎಂ ಸಮೂಹ ಸಂಸ್ಥೆಯ ಪ್ರವೀಣ್‌ಬಲ್ಲಾಳ್‌, ಹೆಬ್ರಿ ರಮೇಶ ಆಚಾರ್ಯ, ರಂಜಿತಾ ತಂದೆ ಮೆಕಾನಿಕ್‌ ರಘುರಾಮ ದೇವಾಡಿಗ, ತಾಯಿ ಪ್ರಮೀಳ ದೇವಾಡಿಗ, ಸೀತಾನದಿ ಸೌಖ್ಯಯೋಗ ಟ್ರಸ್ಟ್‌ ಅಧ್ಯಕ್ಷ ವಿಠ್ಠಲ ಶೆಟ್ಟಿ, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕ ನಿತ್ಯಾನಂದ ಶೆಟ್ಟಿ ನಿರೂಪಿಸಿ ಲಯನ್ಸ್‌ ಕ್ಲಬ್‌ ಹಿರಿಯ ಪ್ರಮುಖರಾದ ಹೆಬ್ರಿ ಟಿ.ಜಿ.ಆಚಾರ್ಯ ಸ್ವಾಗತಿಸಿದರು.

Edited By : Nagesh Gaonkar
Kshetra Samachara

Kshetra Samachara

23/04/2022 09:22 pm

Cinque Terre

10.26 K

Cinque Terre

1

ಸಂಬಂಧಿತ ಸುದ್ದಿ