ಮೂಡುಬಿದಿರೆ: ರಾಷ್ಟ್ರವನ್ನು ಸರಿಯಾಗಿ ಪ್ರಶ್ನಿಸಿದ ಚಿಂತಕ ಮಹಾತ್ಮ ಗಾಂಧೀಜಿ ಎಂದು ಮಂಗಳೂರು ವಿಶ್ವವಿದ್ಯಾಲಯದ ನೆಹರು ಚಿಂತನ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊ. ರಾಜಾರಾಮ್ ತೋಳ್ಪಾಡಿ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರ, ಗಾಂಧಿ ಅಧ್ಯಯನ ಕೇಂದ್ರ ಮತ್ತು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ `ಗಾಂಧಿ ಚಿಂತನ ಯಾನ-2022' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗಾಂಧೀಜಿಯವರು ರಾಷ್ಟ್ರವನ್ನು ಸರಿಯಾದ ರೀತಿಯಲ್ಲಿ ಪ್ರಶ್ನಿಸುವ ಚಿಂತಕರಾಗಿದ್ದರು. ಹಲವು ಕಾರಣಗಳಿಂದ ಗಾಂಧೀಜಿ ನಮಗೆ ಮಾದರಿಯಾಗಿದ್ದಾರೆ. ಪ್ರಸ್ತುತ ಕಾಲ ಘಟ್ಟದಲ್ಲಿ ಗಾಂಧೀಜಿಯವರ ಧೋರಣೆಗಳ ಬಗ್ಗೆ ಜನರಲ್ಲಿ ನಿರ್ಲಕ್ಷ್ಯವಿದೆ. ಈ ನಿಟ್ಟಿನಲ್ಲಿ ವ್ಯಕ್ತವಾಗಿ ಅವ್ಯಕ್ತವಾಗಿ ಗಾಂಧೀಜಿ ಏಕೆ ಬೇಕು ಎನ್ನುವುದರ ಅರಿವು ಮೂಡಿಸಬೇಕಿದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಗಾಂಧಿ ಅಹಿಂಸೆ ಮೂಲಕ ಹಿಂಸೆ ಗೆದ್ದವರು. ಗಾಂಧಿ ಬದುಕಿನ ಮೌಲ್ಯವನ್ನು ಯುವಜನತೆಗೆ ತಿಳಿಸಬೇಕು. ಭಾರತದಲ್ಲಿ ವ್ಯಕ್ತಿಯನ್ನು ಪೂಜಿಸುವುದು ಮಾತ್ರವಲ್ಲ ತತ್ವಗಳನ್ನು ಪೂಜಿಸುವವರು ಇದ್ದಾರೆ. ಕೆಲವೊಮ್ಮೆ ವ್ಯಕ್ತಿ ತತ್ವ ಒಂದೇ ಆಗಿರುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಗಾಂದಿ ಅವರ ಚಿಂತನೆಗಳ ಅರಿವಿಲ್ಲದೆ ಇದ್ದರೆ ಎಷ್ಟು ಚಿಂತನೆ ಮಾಡಿದರೂ ವ್ಯರ್ಥ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಶುಂಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
05/03/2022 09:50 pm