ಕುಂದಾಪುರ: ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ಕುಂದಾಪುರದಲ್ಲಿ ಆಯೋಜಿಸಿದ್ದ ಅಜಾದೀ ಕೆ ಅಮೃತ್ ಮಹೋತ್ಸವ್ ಸಮಾರಂಭವನ್ನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರಕಾರಿ ಯೋಜನೆಗಳು ಜನರಿಗೆ ತಲುಪಿದಾಗ ಸಾರ್ಥಕತೆ ಮೂಡುತ್ತದೆ. ಅಜಾದಿ ಕಾ ಅಮೃತ್ ಮಹೋತ್ಸವ್ ಸಮಾರಂಭಕ್ಕೆ ಆಯ್ಕೆಯಾಗಿರುವ ಕುಂದಾಪುರದ ಜನೌಷಧ ಕೇಂದ್ರ ದೇಶದ ಹೆಮ್ಮೆ. ಸ್ವಾತಂತ್ಯ ಸಿಕ್ಕಿ 75 ವರ್ಷಗಳ ಬಳಿಕವೂ ಶೇ .20 ರಷ್ಟು ಮಂದಿ ಶುದ್ಧ ಕುಡಿಯುವ ನೀರು, ಮನೆ, ಶೌಚಾಲಯದಂತಹ ಮೂಲಸೌಕರ್ಯ ಹೊಂದಿಲ್ಲ ಎನ್ನುವುದು ಮೊದಲು ಅರಿತುಕೊಳ್ಳಬೇಕು ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಮಿಷನರ್ ರಾಜು ಕೆ., ಉಡುಪಿ ಜಿಲ್ಲಾ ವೈದ್ಯಕೀಯ ಪರಿಷತ್ ನ ಡಾ. ರಾಮಚಂದ್ರ ಕಾಮತ್, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೊ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ನಾಗರಿಕರಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಿಸಣೆಯ ಜೊತೆಗೆ ಉಚಿತ
ವೈದ್ಯಕೀಯ ತಪಾಸಣೆ ಜರುಗಿತು.
Kshetra Samachara
12/10/2021 11:32 am