ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಸಚಿವ ಸುನಿಲ್ ಕುಮಾರ್ ಸಂಗ್ರಹಿಸಿದ 3500 ಪುಸ್ತಕಗಳ ಪ್ರದರ್ಶನ!

ಕಾರ್ಕಳ: ಹಾರ-ತುರಾಯಿ ಬಿಡಿ- ಪುಸ್ತಕ ಕೊಡಿ, ಎಂದು ಕರೆಕೊಟ್ಟ ಬೆನ್ನಲ್ಲೇ.. ಸಾಹಿತ್ಯದ ಸಾಗರವೇ ಹರಿಯಲಾರಂಭಿಸಿದೆ.

ಸಚಿವ ಸುನಿಲ್ ಕುಮಾರ್ ಇದೇ ಮೊದಲ ಬಾರಿಗೆ ರಾಜ್ಯ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದಿದ್ದಾರೆ. ಕೆಲಸ ಮಾಡುವ ಇಲಾಖೆಯಲ್ಲಿ ಏನಾದರೂ ಛಾಪು ಮೂಡಿಸಬೇಕು ಎನ್ನುವ ಕನಸು ಹೊತ್ತಿದ್ದಾರೆ.ಕನ್ನಡದ ಕಾಯಕ ಮಾಡುವ ಸಂಸ್ಕೃತಿ ಇಲಾಖೆ ಯ ಹೊಣೆಯನ್ನು ಖುಷಿಖುಷಿಯಾಗಿ ಒಪ್ಪಿಕೊಂಡಿದ್ದಾರೆ. ವಚನಗಳ ಅನುಭವ ಮಂಟಪ , ಎಂಟು ಜ್ಞಾನಪೀಠ, ವೈಚಾರಿಕತೆ- ವಿಜ್ಞಾನ , ಪ್ರಾಂತ್ಯಕ್ಕೊಂದು ಸೊಗಡಿನ ಕನ್ನಡ.. ಹೀಗೆ ಶ್ರೀಮಂತ ಸಂಸ್ಕೃತಿಯ ಸಂಕೇತವಾದ ಕನ್ನಡ ಭಾಷೆಗೆ ವಿಶೇಷ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

ಸಚಿವಗಿರಿ ಪಡೆದು ಇಲಾಖಾ ಕಚೇರಿಯಿಂದ ಹೊರ ಬರುವಾಗಲೇ ಹೊಸತನದ ಆದೇಶ ಹೊರಡಿಸಿದ್ದರು ಸುನೀಲ್ ಕುಮಾರ್. ಹಾರ-ತುರಾಯಿ ನೀಡಬೇಡಿ.. ಪುಸ್ತಕ ಕೊಡಿ ಓದುವ ಸಂಸ್ಕೃತಿ ಬೆಳೆಸೋಣ ಎಂದು ಕರೆ ನೀಡಿದ್ದರು. ಜನರೂ ಕೂಡ ಸಚಿವರು ಬರುತ್ತಾರೆ ಅಂದ್ರೆ ಆ ಕಾರ್ಯಕ್ರಮದಲ್ಲಿ ಪುಸ್ತಕದಂಗಡಿ ತಲೆ ಎತ್ತಲು ಆರಂಭವಾಗಿದೆ. ಸಚಿವರನ್ನು ಅಭಿನಂದಿಸುವವರು, ಧನ್ಯವಾದ ಸಲ್ಲಿಸುವವರು, ಇಂಪ್ರೆಸ್ ಮಾಡುವವರು ಹೀಗೆ ಎಲ್ಲರೂ ಕಿಸೆಯಿಂದ ಹಣ ತೆಗೆದು ಪುಸ್ತಕ ಖರೀದಿಸಲು ಮುಗಿಬಿದ್ದಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಸುಮಾರು 3500 ಪುಸ್ತಕಗಳನ್ನು ಸುನೀಲ್ ಕುಮಾರ್ ಸಂಗ್ರಹಿಸಿದ್ದಾರೆ. ಹೀಗೆ ಸಂಗ್ರಹವಾದ ಪುಸ್ತಕಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಜಿಲ್ಲೆಯ ಗ್ರಾಮ ಪಂಚಾಯತ್ ಗಳ ಗ್ರಂಥಾಲಯಕ್ಕೆ ನೀಡಲಾಗುತ್ತಿದೆ.

ಸಚಿವ ಸುನಿಲ್ ಕುಮಾರ್ ತಾವು ಸ್ಮರಣಿಕೆಯಾಗಿ ಪಡೆದ ಪುಸ್ತಕಗಳ ಪ್ರದರ್ಶನವನ್ನು ತನ್ನ ಕ್ಷೇತ್ರ ಕಾರ್ಕಳದಲ್ಲಿ ಏರ್ಪಡಿಸಿದ್ದರು. ಮೂರು ದಿನಗಳ ಕಾಲ ಮೂರು ಸಾವಿರ ಪುಸ್ತಕಗಳ ಪ್ರದರ್ಶನ ಮಾಡಿ, ನಂತರ ಗ್ರಂಥಾಲಯಕ್ಕೆ ಹಸ್ತಾಂತರಿಸುವ ಅಪರೂಪದ ಕಾರ್ಯಕ್ರಮ ಇದಾಗಿದೆ.

Edited By : Nagesh Gaonkar
Kshetra Samachara

Kshetra Samachara

10/09/2021 06:00 pm

Cinque Terre

39.06 K

Cinque Terre

1

ಸಂಬಂಧಿತ ಸುದ್ದಿ