ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕದ್ರಿ ಜೋಗಿ ಮಠದಲ್ಲಿ‌ ನೂತನ ಗುರುಮಠ ಉದ್ಘಾಟಿಸಿದ ಯೋಗಿ‌ ಆದಿತ್ಯನಾಥ್

ಮಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳೂರಿನ‌ ಕದ್ರಿಯಲ್ಲಿರುವ ಶ್ರೀ ಯೋಗೀಶ್ವರ ಜೋಗಿ ಮಠಕ್ಕೆ ಭೇಟಿ ನೀಡಿದರು.

ಕೇರಳ ವಿಧಾನಸಭೆ ಚುನಾವಣೆಯ ವಿಜಯ ಯಾತ್ರೆಯನ್ನು ಉದ್ಘಾಟಿಸಲು ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಕಾಸರಗೋಡಿಗೆ ತೆರಳಿ ಹಿಂತಿರುಗಿ ಬಂದ ಯೋಗಿ ಆದಿತ್ಯನಾಥರು, ಬಳಿಕ ಕದ್ರಿ ಜೋಗಿ ಮಠಕ್ಕೆ ಆಗಮಿಸಿದರು.

ಈ ವೇಳೆ ಜೋಗಿ ಮಠದ ಪ್ರಮುಖರು ಬರಮಾಡಿಕೊಂಡರು. ಶ್ರೀ ಯೋಗೀಶ್ವರ ಮಠದಲ್ಲಿ ಹಾಗೂ ಅಲ್ಲೇ ಇರುವ ಕಾಲಭೈರವ ದೇವರಿಗೆ ಪೂಜೆ ಸಲ್ಲಿಸಿದ ಯೋಗಿ, ಬಳಿಕ ಫಲಾಹಾರ ಸೇವಿಸಿದರು.

ನಾಥ ಪಂಥದ ಪ್ರಮುಖ ಮಠವಾಗಿರುವ ಕದ್ರಿಯ ಜೋಗಿ ಮಠದಲ್ಲಿ‌ ನೂತನವಾಗಿ ನಿರ್ಮಿಸಿರುವ ಗುರುಮಠವನ್ನು ಯೋಗಿ ಆದಿತ್ಯನಾಥ್ ಈ ಸಂದರ್ಭ ಉದ್ಘಾಟಿಸಿದರು.

ಇದೇ ವೇಳೆ ಉಡುಪಿ ಮಠದ ಪೇಜಾವರ ಶ್ರೀಗಳು ಯೋಗಿ ಆದಿತ್ಯನಾಥ್ ರನ್ನು ಮಠದಲ್ಲೇ ಭೇಟಿ ಮಾಡಿದರು. ಕೆಲ ಕಾಲ ಮಠದಲ್ಲಿದ್ದ ಯೋಗಿ ಆದಿತ್ಯನಾಥರು, ಬಳಿಕ ಬಜಪೆ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದಲ್ಲಿ ಉತ್ತರಪ್ರದೇಶಕ್ಕೆ ವಾಪಸಾದರು.

Edited By : Manjunath H D
Kshetra Samachara

Kshetra Samachara

21/02/2021 11:08 pm

Cinque Terre

22.4 K

Cinque Terre

1

ಸಂಬಂಧಿತ ಸುದ್ದಿ