ಉಡುಪಿ: ಕಡೇಕಾರ್ ಗ್ರಾ ಪಂ ವ್ಯಾಪ್ತಿಯ ಕುತ್ಪಾಡಿ ಭಾಗದಲ್ಲಿ ವಿವಿಧ ಕಾಮಗಾರಿಗಳನ್ನು ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಿದರು.
ಕಡೇಕಾರ್ ಗ್ರಾ ಪಂ ವ್ಯಾಪ್ತಿಯ ಕಟ್ಟೆಗುಡ್ಡೆ ಜಂಕ್ಷನ್ ನಲ್ಲಿ ಸಿ.ಸಿ. ಟಿವಿ ಅಳವಡಿಕೆ, ಜಿಪಂ ಅನುದಾನದಿಂದ ಕುಡಿಯುವ ನೀರಿನ ಬಾವಿ ಹಾಗೂ ಚಿಣ್ಣರ ಆಟದ ಮೈದಾನದ ಪೂರ್ಣಗೊಂಡ ಕಾಮಗಾರಿ ಉದ್ಘಾಟಿಸಿದರು.
ಜಿಪಂ ಅಧ್ಯಕ್ಷ ದಿನಕರ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿ ಅಮೀನ್, ಕಡೇಕಾರ್ ಪಂ. ಮಾಜಿ ಅಧ್ಯಕ್ಷ ರಘುನಾಥ್ ಕೋಟ್ಯಾನ್, ಮಾಜಿ ಉಪಾಧ್ಯಕ್ಷೆ ಮಾಲತಿ ಶೆಟ್ಟಿ, ಕಡೇಕಾರ್ ಪಂ. ಮಾಜಿ ಸದಸ್ಯರಾದ ಪ್ರದೀಪ್ ಚಂದ್ರ ಕುತ್ಪಾಡಿ, ರಾಘವೇಂದ್ರ ಕುತ್ಪಾಡಿ, ವೀಣಾ ಪ್ರಕಾಶ್ ಬಂಗೇರ, ವಿನೋದಿನಿ, ಶಕ್ತಿ ಕೇಂದ್ರದ ಸಹ ಸಂಚಾಲಕ ಉಮೇಶ್ ಕುತ್ಪಾಡಿ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಬೂತ್ ಅಧ್ಯಕ್ಷ ಶಿವಾನಂದ ಪೂಜಾರಿ ಹಾಗೂ ರಂಜನ್ ಪಡುಕೆರೆ, ರಾಕೇಶ್, ಪ್ರಶಾಂತ್ ಸಾಲ್ಯಾನ್ ಹಾಗೂ ಪಿಡಿಒ, ಪಕ್ಷದ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
29/09/2020 06:27 pm