ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕೊರಗರ 'ಭೂಮಿ ಹಬ್ಬ'; ಶಾಸಕರ ನೇತೃತ್ವದಲ್ಲಿ ಜಾಥಾ

ಕುಂದಾಪುರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ - ಕೇರಳ ವತಿಯಿಂದ ಹಮ್ಮಿಕೊಳ್ಳಲಾದ 14ನೇ ವರ್ಷದ ಕೊರಗರ 'ಭೂಮಿ ಹಬ್ಬ' ಕುಂದಾಪುರದಲ್ಲಿಂದು ನಡೆಯಿತು. ಭೂಮಿ ಹಬ್ಬದ ಅಂಗವಾಗಿ ಕುಂದಾಪುರ ಶಾಸ್ತ್ರೀ ಸರ್ಕಲ್ ನಿಂದ ಅಂಬೇಡ್ಕರ್ ಸಭಾ ಭವನದವರೆಗಿನ ಜಾಥಾಕ್ಕೆ ಶಾಸಕ ರಘುಪತಿ ಭಟ್ ಡೋಲು ಬಡಿಯುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ರಘುಪತಿ ಭಟ್, ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ ಅತೀ ಹಿಂದುಳಿದಿದ್ದ ಕೊರಗ ಸಮುದಾಯವನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ 2008 ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಮೊದಲ ಬಾರಿ ಆಯವ್ಯಯದಲ್ಲಿ ಕೊರಗ ಸಮುದಾಯದ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ಘೋಷಿದರು. ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳುತ್ತಾ ಇಂದು ಕೊರಗ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಬಿಜೆಪಿ ಆಡಳಿತದಿಂದ ಮಾತ್ರ ಎಲ್ಲ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದರು.

Edited By : Shivu K
Kshetra Samachara

Kshetra Samachara

18/08/2022 02:27 pm

Cinque Terre

17.52 K

Cinque Terre

0

ಸಂಬಂಧಿತ ಸುದ್ದಿ