ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ನಾಯಕನಿಗೆ ಬ್ಲಾಕ್ ಮೇಲ್ : 10 ಲಕ್ಷಕ್ಕೆ ಬೇಡಿಕೆಯಿಟ್ಟು ಕೊಲೆ ಬೆದರಿಕೆ

ಕುಂದಾಪುರ : ಕಾಂಗ್ರೆಸ್ ಯುವ ನಾಯಕನೊಬ್ಬನ ಮೊಬೈಲ್ ಗೆ ಕರೆ ಮಾಡಿ ಹತ್ತು ಲಕ್ಷ ರೂಪಾಯಿ ನೀಡದೆ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ಬನ್ನಾಡಿ ಎಂಬಲ್ಲಿ ನಡೆದಿದೆ. ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಬನ್ನಾಡಿಯ ಅಜಿತ್ ಕುಮಾರ್ ಶೆಟ್ಟಿ ಎಂಬುವರೇ ಬೆದರಿಕೆಗೊಳಗಾಗಿ ಪೊಲೀಸರಿಗೆ ದೂರು ನೀಡಿದವರು. ಭರತ್ ದಾಸ್ ಹಾಗೂ ಇನ್ನೋರ್ವ ವ್ಯಕ್ತಿ ಆರೋಪಿಗಲಾಗಿದ್ದಾರೆ.

ಆಗಸ್ಟ್ 31ರಂದು ಸಂಜೆ 5 ಗಂಟೆಗೆ ಅಜಿತ್ ಕುಮಾರ್ ಶೆಟ್ಟಿಯವರ 9945562016 ನಂಬರ್ ಗೆ 97470496814 ನಿಂದ ವಾಟ್ಸಾಪ್ ಕರೆ ಬಂದಿದ್ದು, ಅನಾಮಿಕ ಕರೆಯಾದ್ದರಿಂದ ಸ್ವೀಕರಿಸಿರಲಿಲ್ಲ. ಪದೇ ಪದೇ ಕರೆ ಬರಲಾರಂಭಿಸಿದ ನಂತರ ಕರೆ ಸ್ವೀಕರಿಸಿದ್ದು ಆಚೆಯಿಂದ ಕರೆ ಮಾಡಿದಾತ ತನ್ನನ್ನು ಭರತ್ ದಾಸ ಕರೆ ಮಾಡಲು ಸೂಚಿಸಿದ್ದು ,ನೀನು ನನಗೆ 10.00.000 ಹಣವನ್ನು ಕೂಡಲೇ ನೀಡಿ ಬಿಡು ಇಲ್ಲವಾದಲ್ಲಿ ನಿನ್ನನ್ನು ಕೊಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾನೆನ್ನಲಾಗಿದೆ. ಸ್ವಲ್ಪ ಸಮಯದ ನಂತರ ಕರೆ ಮಾಡಿದ ವ್ಯಕ್ತಿಯು ವಾಟ್ಸಾಪ್ ನಲ್ಲಿ ಧ್ವನಿ ಮುದ್ರಿತ ಮೇಸೇಜನ್ನು ಕಳುಹಿಸಿದ್ದು, ಅಜಿತ್ ಶೆಟ್ಟಿಯನ್ನು ಅವಾಚ್ಯ ವಾಗಿ ನಿಂದಿಸಿ ಬೆಳಿಗ್ಗೆ ಆಗುವುದರೊಳಗೆ ತೆಗೆದು ಬಿಡುತ್ತೇನೆ ಎಂದು ಬೆದರಿಸಿಲಾಗಿದೆ ಎನ್ನಲಾಗಿದೆ.

ಇನ್ನೊಂದು ಮೆಸೇಜ್ ಬಂದಿದ್ದು, ಅದರಲ್ಲಿ ಬೆಳಿಗ್ಗೆ ಆಗುವುದರೊಳಗೆ ತೆಗೆದುಬಿಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಲಾಗಿದೆ ಎಂದು ಕಾಲ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

03/09/2022 08:47 am

Cinque Terre

12.5 K

Cinque Terre

0

ಸಂಬಂಧಿತ ಸುದ್ದಿ