ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಪ್ರವೀಣ್ ಹತ್ಯೆ ತನಿಖೆಯನ್ನ ಎನ್ಐಗೆ ಕೊಟ್ಟು ನಮ್ಮ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ!

ಸುಳ್ಯ: ಪ್ರವೀಣ್ ಹತ್ಯೆ ತನಿಖೆಯನ್ನ ಸರ್ಕಾರ ಎನ್ಐಗೆ ಕೊಟ್ಟು ನಮ್ಮಲ್ಲಿರುವ ಉತ್ತಮ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡಿದೆ. ಏನ್ಐಎ ಗೆ ಈ ಹಿಂದೆ ಕೊಟ್ಟ ಯಾವುದೇ ಪ್ರಕರಣ ಸರಿಯಾದ ರೀತಿಯಲ್ಲಿ ಮಾಡಿಲ್ಲ. ಈ ಪ್ರಕರಣವನ್ನು ಏನ್ಐಎ ಕಾಟಚಾರಕ್ಕೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.

ಅವರು ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಮತ್ತು ವಿಷ್ಣುನಗರ ಕಲೆಂಜದಲ್ಲಿ ನಡೆದ ಮಹಮ್ಮದ್ ಮಸೂದ್ ಮನೆಗೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು.

ಸರಕಾರಕ್ಕೆ ಹೇಳುವುದು ಇಷ್ಟೇ ಈ ಪ್ರಕರಣದ ತನಿಖೆಯಾದರೂ ಕಾಟಚಾರಕ್ಕೆ ಆಗಬಾರದು. ಈಗಾಗಲೇ ನಮ್ಮಲ್ಲಿ ಸಮರ್ಪಕವಾಗಿ ತನಿಖೆ ಮಾಡುವ ಅಧಿಕಾರಿಗಳನ್ನು ಬದಿಗೊತ್ತಿ ತನಿಖೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಕುಟುಂಬಗಳು ನ್ಯಾಯಾವಂಚಿತರಾಗಬಾರದು.

ಈಗಾಗಲೇ ಈ ಎರಡು ಕುಟುಂಬಗಳಿಗೆ ನಮ್ಮ ಕಡೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಿದ್ದೇವೆ. ಯಾವುದೇ ಸಮಸ್ಯೆ ಎದುರಾದಲ್ಲಿ ನನ್ನನ್ನು ಸಂಪರ್ಕಿಸುವಂತೆ ನನ್ನ ದೂರವಾಣಿ ಸಂಖ್ಯೆಯನ್ನೂ ನೀಡಿದ್ದೇನೆ ಎಂದು ಅವರು ಹೇಳಿದರು. ಪ್ರವೀಣ್ ಕುಟುಂಬಕ್ಕೆ ಭೇಟಿ ನೀಡಿ ನಂತರದಲ್ಲಿ ಮಹಮ್ಮದ್ ಮಸೂದ್ ಮನೆಗೂ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

Edited By : Shivu K
PublicNext

PublicNext

01/08/2022 08:21 pm

Cinque Terre

16.2 K

Cinque Terre

0

ಸಂಬಂಧಿತ ಸುದ್ದಿ