ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಯೂ ಸಂಘ ಪರಿವಾರ ಮತ್ತು ಬಿಜೆಪಿ ಸರ್ಕಾರದ ಜನಪ್ರತಿನಿಧಿಗಳ ಪ್ರಚೋದನಕಾರಿ ಹೇಳಿಕೆ ಹಾಗೂ ಕೆಲ ಮಾಧ್ಯಮಗಳ ಕೋಮು ವೈಷಮ್ಯ ತುಂಬಿದ ವರದಿಗಳೇ ಕಾರಣ ಎಂದು ಎಸ್‌ಡಿಪಿಐ ಆರೋಪಿಸಿದೆ.
ನಗರದ ಎಸ್ ಡಿಪಿಐ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಅಥಾವುಲ್ಲಾ ಜೋಕಟ್ಟೆ, ಅನ್ವರ್ ಸಾದಾತ್ ಬಜತ್ತೂರು, ಹತ್ಯೆ ನಡೆದ ನಂತರ ಬೆಳ್ಳಾರೆ ಕಳಂಜದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ದಾಂಧಲೆಗೆ ಸರ್ಕಾರವೇ ನೇರ ಹೊಣೆ. ಪ್ರವೀಣ್ ಕುಟುಂಬವನ್ನು ಭೇಟಿಯಾಗಲು ಬಂದು ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಒಂದೂವರೆ ತಿಂಗಳ ಹಿಂದೆ ಮತ್ತು ವಾರದ ಹಿಂದೆ ಸಂಘಪರಿವಾರ ಗೂಂಡಾಗಳಿಂದ ಹತ್ಯೆಗೊಳಗಾದ ಪೆರ್ಲಂಪಾಡಿ ಚರಣ್ ರಾಜ್ ಮತ್ತು ಕಳಂಜ ಮಸೂದ್ ಮನೆಗೆ ಭೇಟಿ ನೀಡದೆ ರಾಜಧರ್ಮಕ್ಕೆ ದ್ರೋಹವೆಸಗಿದ್ದಾರೆ.
ಸುರತ್ಕಲ್ ನಲ್ಲಿ ಫಾಝಿಲ್ ನ ಹತ್ಯೆ ಕೃತ್ಯದ ಹಿಂದೆ ಯಾರೆಲ್ಲ ಭಾಗಿಯಾಗಿದ್ದಾರೋ ಅವರನ್ನು ಹಾಗೂ ಕೊಲೆ ನಂತರ ಸಂಘ ಪರಿವಾರದಂತೆ ಸುಳ್ಳು ಮಾಹಿತಿ ವರದಿ ಮಾಡಿ ಜನರಿಗೆ ತಪ್ಪು ಸಂದೇಶ ರವಾನಿಸಿದ ಕೆಲ ಟಿವಿ ಮಾಧ್ಯಮಗಳ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
PublicNext
29/07/2022 08:37 pm