ಮಂಗಳೂರು: ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಲೇ ಇದೆ. ಆದರೆ ಲವ್ ಜಿಹಾದ್‌ಗೆ ಇನ್ನೂ ಮುಗ್ಧ ಜೀವಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಇದೀಗ ಈ ಬಂಟ್ವಾಳ ತಾಲೂಕಿನ ಕಣಿಯೂರು ಗ್ರಾಮದ 9ನೇ ತರಗತಿಯ ಬಾಲಕಿ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ.
ಬಡ ದಲಿತ ಕುಟುಂಬದಿಂದ ಬಾಲಕಿಯ ತಂದೆಯೊಂದಿಗೆ ಶಾಹುಲ್ ಹಮೀದ್(30) ಎಂಬಾತ ಕೆಲಸ ಮಾಡುತ್ತಿದ್ದ. ಈ ಸಂದರ್ಭ ಬಾಲಕಿಯನ್ನು ಪರಿಚಯ ಮಾಡಿಕೊಂಡ ಆತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿದ್ದ. ಆದರೆ ಮನೆಯವರ ಮಾತಿನಂತೆ ಆಕೆ ಆತನನ್ನು ದೂರವಿಡಲು ಪ್ರಯತ್ನಿಸಿದ್ದಳು. ಆದರೆ ಶಾಹುಲ್ ಹಮೀದ್ ಮಾತ್ರ ಆಕೆಯ ಬೆನ್ನು ಬಿಡದೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಬ್ಲ್ಯಾಕ್ ಮ್ಯಾಜಿಕ್ ಅನ್ನೂ ಮಾಡಿ ತಲೆ ಕೆಡಿಸುವ ಪ್ರಯತ್ನ ಮಾಡಿದ್ದ ಎನ್ನಲಾಗಿದೆ.
ಇದರಿಂದ ಬೇಸತ್ತ ಬಾಲಕಿ ತಮ್ಮ ಬಾಡಿಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಏಕಾಏಕಿ ಪುತ್ರಿಯ ಅಗಲುವಿಕೆ ಹೆತ್ತವರಿಗೆ ಆಘಾತ ತಂದಿದೆ. ಆರೋಪಿ ಶಾಹುಲ್ ಹಮೀದ್ ತಮ್ಮ ಪುತ್ರಿಯ ಸಾವಿಗೆ ಕಾರಣವೆಂದು ದೂರು ದಾಖಲಿಸಿದ್ದಾರೆ. ಆಕೆಯ ಸಾವಿನ ಬಳಿಕ ತಲೆಮರೆಸಿಕೊಂಡ ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಆದರೆ ಇದೀಗ ಸಾವಿನ ಬಗ್ಗೆಯೂ ಸಂಶಯ ಮೂಡಿದೆ. ಆದ್ದರಿಂದ ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸಾವಿನ ಹಿಂದಿನ ಸತ್ಯವನ್ನು ಬಯಲು ಮಾಡಬೇಕು. ಲವ್ ಜಿಹಾದ್‌ಗೆ ಪ್ರಯತ್ನ ಪಟ್ಟ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
PublicNext
07/05/2022 11:00 pm