ಉಡುಪಿ: ತಮಗೆ ಬಂದಿರುವ ಬೆದರಿಕೆ ಕರೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್ ,ಇಂತಹ ಹಲವು ಬೆದರಿಕೆಗಳನ್ನು ನಾವು ತುಂಬಾ ನೋಡಿದ್ದೇವೆ. ಆದರೆ ಉಡುಪಿ ಜಿಲ್ಲೆಯ ಮುಸಲ್ಮಾನರ ಒಂದೂ ಪ್ರತಿರೋಧ ಬಂದಿಲ್ಲ.ಉಡುಪಿ ,ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ ಎಂದು ಹೇಳಿದ್ದಾರೆ.
ಬಾಲ್ಯದಿಂದಲೇ ಇಂಥ ಹಲವು ಬೆದರಿಕೆಗಳನ್ನು ನಾನು ನೋಡಿದ್ದೇನೆ.ಉಡುಪಿಯ ಮುಸ್ಲಿಮ್ ಒಕ್ಕೂಟ ಮತ್ತು ಖಾಜಿಗಳು ನನಗೆ ಬೆಂಬಲ ನೀಡಿದ್ದಾರೆ.ಉಡುಪಿ ಶಾಸಕರ ನಿಲುವು ಸರಿ ಇದೆ ಎಂದು ಸಪೋರ್ಟ್ ಮಾಡಿದ್ದಾರೆ.ನನಗೆ ದೇವರಿದ್ದಾರೆ ,ಅವರೇ ನನ್ನ ಭದ್ರತೆ.ಉಡುಪಿ ಎಸ್ಪಿ ವಿಷ್ಣುವರ್ಧನ್ ಫೋನ್ ಮಾಡಿದ್ದಾರೆ.ಉಡುಪಿ ಕ್ಷೇತ್ರದ ಜನರೇ ನನಗೆ ಸೆಕ್ಯುರಿಟಿ ಗಾರ್ಡ್.ಯಾವುದೇ ಒಬ್ಬ ವ್ಯಕ್ತಿ,ಅಥವಾ ಒಂದು ಸಂಘಟನೆಯಿಂದ ಬೆದರಿಕೆ ಬಂದಿಲ್ಲ ಎಂದು ಹೇಳಿದರು.
ಹೈದರಾಬಾದ್ ನಿಂದ ಫೋನ್ ಕರೆ ಮಾಡಿ ಒಬ್ಬ ಹುಚ್ಚ ಮಾತನಾಡಿದ್ದಾನೆ.ಅವನಿಗೆ ಇಪ್ಪತ್ತು ನಿಮಿಷಗಳ ಕಾಲ ಉತ್ತರ ಕೊಟ್ಟಿದ್ದೇನೆ.ಮುಸ್ಲಿಮರಿಗೆ ಸಮಸ್ಯೆಯಿಲ್ಲ, ಆರು ಮಕ್ಕಳ ತಲೆ ಹಾಳು ಮಾಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
PublicNext
12/02/2022 03:14 pm