ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಮೆಹಂದಿ ಲಾಠಿಚಾರ್ಜ್ ಪ್ರಕರಣ'; ದಿಬ್ಬಣದಲ್ಲಿ ಸಚಿವ ಕೋಟ, ಡಿಸಿ, ಎಸ್ಪಿ ಭಾಗಿ

ಕೋಟ: ಕೊರಗರ ಮೆಹಂದಿ ಸಮಾರಂಭಕ್ಕೆ ಪೊಲೀಸರು ದಾಳಿ ಮಾಡಿ ಲಾಠಿಚಾರ್ಜ್ ಮಾಡಿದ ಘಟನೆಯ ಸಂತ್ರಸ್ತ ಯುವಕ ರಾಜೇಶ್ ಹಾಗೂ ಶಿಲ್ಪಾ ಅವರ ಮದುವೆ ದಿಬ್ಬಣ ಬುಧವಾರ ರಾತ್ರಿ ಕೋಟದ ಮನೆಗೆ ಆಗಮಿಸುವ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬರಮಾಡಿಕೊಂಡರು.

ಸಚಿವರ ಜೊತೆಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್, ಎಸ್ಪಿ ಎನ್. ವಿಷ್ಣುವರ್ಧನ್ ಉಪಸ್ಥಿತರಿದ್ದರು.

ಅನಂತರ ವಧು-ವರರಿಗೆ ಶುಭ ಕೋರಿ, ಕೊರಗ ಸಮುದಾಯದ ಮುಖಂಡರು, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಸಚಿವರು ಮಾತನಾಡಿ, ಘಟನೆ ಬಗ್ಗೆ ಸರಕಾರ ವಿಷಾದ ವ್ಯಕ್ತಪಡಿಸುತ್ತದೆ. ಈಗಾಗಲೇ ತಪ್ಪಿತಸ್ಥರಿಗೆ ಒಂದು ಹಂತದ ಶಿಕ್ಷೆಯಾಗಿದ್ದು ಸಮಗ್ರ ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ಸಂದರ್ಭ ಮಾತನಾಡಿದ ಸಂತ್ರಸ್ತರು, ಘಟನೆ ಆರೋಪಿ ಉಪನಿರೀಕ್ಷಕರನ್ನು ಮಾತ್ರ ಅಮಾನತು ಮಾಡಲಾಗಿದೆ. ಸಿಬಂದಿ ಕೂಡ ಕಾರಣರಾಗಿದ್ದು ಅವರನ್ನೂ ಅಮಾನತು ಮಾಡಬೇಕು ಮತ್ತು ಕೋಟ ಠಾಣೆಯಲ್ಲಿ ನಾಲ್ಕೈದು ವರ್ಷ ದಿಂದಲೂ ಇರುವ ಎಲ್ಲರನ್ನೂ ವರ್ಗಾವಣೆ ಮಾಡಬೇಕು. ಪೊಲೀಸರ ನೆರಳಿನಲ್ಲೇ ನಡೆಯುತ್ತಿರುವ ಅಕ್ರಮ ಚಟು ವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

* ಹಕ್ಕುಪತ್ರ ನೀಡುತ್ತೇವೆ:

ಇನ್ನು ಇದೇ ವೇಳೆ ಇಲ್ಲಿನ ಒಂಬತ್ತು ಮಂದಿ ಕೊರಗ ಕುಟುಂಬಗಳಿಗೆ ಹಕ್ಕುಪತ್ರವಿಲ್ಲದೆ ಸಮಸ್ಯೆಯಾಗುತ್ತಿರುವ ಕುರಿತು ಸಚಿವರು ಪ್ರಸ್ತಾವಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ರಸ್ತೆ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದರು.ಕುಟುಂಬದ ಶಿಕ್ಷಿತ ವಿದ್ಯಾರ್ಥಿಗಳಿಗೆ ಆದ್ಯತೆಯಲ್ಲಿ ಉದ್ಯೋಗ ಭರವಸೆಯನ್ನೂ ಸಹ ನೀಡಲಾಯಿತು.

Edited By : Manjunath H D
PublicNext

PublicNext

30/12/2021 11:12 am

Cinque Terre

50.52 K

Cinque Terre

1

ಸಂಬಂಧಿತ ಸುದ್ದಿ