ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಗೋರಕ್ಷಕರ ಮೇಲೆ ವಾಹನ ಹತ್ತಿಸಿದ ಪ್ರಕರಣ: ಗಾಯಾಳುಗಳನ್ನು ಭೇಟಿಯಾದ ಗೃಹ ಸಚಿವ

ಮಣಿಪಾಲ: ತೀರ್ಥಹಳ್ಳಿಯ ಮಾಳೂರಿನಲ್ಲಿ ಗೋರಕ್ಷಕರ ಮೇಲೆ ವಾಹನ ಹತ್ತಿಸಿದ ಪ್ರಕರಣದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇಬ್ಬರನ್ನು ಇಂದು ಗೃಹ ಸಚಿವರು ಭೇಟಿ ಮಾಡಿದರು. ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಘಟನೆ ನಡೆದಿತ್ತು. ಗೋಸಾಗಾಟ ತಡೆಯುವ ವೇಳೆ ಇಬ್ಬರ ಮೇಲೆ ದುಷ್ಕರ್ಮಿಗಳು ಟೆಂಪೋ ಹತ್ತಿಸಿದ್ದರು.ಈ ವೇಳೆ ಇಬ್ವರು ತೀವ್ರ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಇಬ್ಬರ ಆರೋಗ್ಯ ವಿಚಾರಿಸಿದ ಆರಗ ಜ್ಞಾನೇಂದ್ರ, ಕೆಎಂಸಿ ಆಸ್ಪತ್ರೆಯ ವೈದ್ಯರ ಜೊತೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಆರಗ ಜ್ಞಾನೇಂದ್ರ ಆಗಮಿಸುವ ವಿಷಯವನ್ನು ಗೌಪ್ಯವಾಗಿಡಲಾಗಿತ್ತು. ಉಡುಪಿ ಬಿಜೆಪಿ ನಾಯಕರಿಗೂ ಭೇಟಿ ವಿಷಯ ತಿಳಿದಿರಲಿಲ್ಲ.

Edited By : Nagaraj Tulugeri
Kshetra Samachara

Kshetra Samachara

01/12/2021 12:58 pm

Cinque Terre

8.25 K

Cinque Terre

1

ಸಂಬಂಧಿತ ಸುದ್ದಿ