ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೆಳ್ವೆಯ ಚರ್ಚ್ ಫಾದರ್ ವಿರುದ್ಧ ತಿರುಗಿಬಿದ್ದಿವೆ 32 ಕುಟುಂಬಗಳು; ಚರ್ಚ್ ಗೇ ಬೀಗ ಜಡಿದು ಪ್ರತಿಭಟನೆ!

ಹೆಬ್ರಿ: ಬೆಳ್ವೆಯ ಗುಮ್ಮಹೊಲ ಎಂಬಲ್ಲಿಯ ಸೈಂಟ್ ಜೋಸೆಫ್ ಚರ್ಚ್ ಧರ್ಮಗುರು ವಿರುದ್ಧ ಇಡೀ ಗ್ರಾಮಸ್ಥರೇ ತಿರುಗಿ ಬಿದ್ದಿದ್ದಾರೆ.ಭಕ್ತಾದಿಗಳಿಗೆ ಅವಹೇಳನ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪ ಇವರ ವಿರುದ್ಧ ಕೇಳಿಬಂದಿದ್ದು ಚರ್ಚ್ ಗೇ ಬೀಗ ಜಡಿಯಲಾಗಿದೆ.ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಮಗೆ ಚರ್ಚೂ ಬೇಡ ,ಗುರುವೂ ಬೇಡ ಎಂದು ಕುಳಿತಿದ್ದಾರೆ ಇಲ್ಲಿಯ ಗ್ರಾಮಸ್ಥರು!

ಅರ್ಧ ಶತಮಾನ ಇತಿಹಾಸ ಹೊಂದಿರುವ ಉಡುಪಿ ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲದ ಸಂತ ಜೋಸೆಫರ ಚರ್ಚ್‌ಗೆ ಕೇವಲ 3 ತಿಂಗಳ ಹಿಂದೆ ಗುರುಗಳಾಗಿ ಬಂದವರು ಅಲೆಕ್ಸಾಂಡರ್‌ ಲೂವಿಸ್ .ಇಷ್ಟರಲ್ಲೇ ಇವರ ವಿರುದ್ಧ ಭಕ್ತಾದಿಗಳಿಗೆ ಅವಹೇಳನ ಮಾಡಿದ್ದಲ್ಲದೆ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಜೊತೆಗೆ ಅಧಿಕಾರ ದುರುಪಯೋಗಪಡಿಸಿಕೊಂಡು ಐಷಾರಾಮಿ ಜೀವನಕ್ಕಾಗಿ ಭಕ್ತರ ಮನಸ್ಸಿಗೆ ಘಾಸಿ ಮಾಡಿದ್ದಾರೆ ಎಂಬುದು ಭಕ್ತರ ಆಕ್ರೋಶ. ಯಾವ ಪರಿ ಸ್ಥಳೀಯರ ಆಕ್ರೋಶ ಸ್ಪೋಟಗೊಂಡಿದೆ ಎಂದರೆ ಈ ಫಾದರೇ ನಮಗೆ ಬೇಡ ಅಂತಿದಾರೆ ಗ್ರಾಮಸ್ಥರು.

ಭಕ್ತರು ಈ ಧರ್ಮಗುರು ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅವರಿಗೂ ಮನವಿ ಸಲ್ಲಿಸಿದ್ದಾರೆ. ಅದ್ಯಾವುದರಿಂದಲೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಚರ್ಚೆ ಗೇಟ್ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಚರ್ಚ್ ನಂಬಿಕೊಂಡು ಬಂದ 32 ಕುಟುಂಬಗಳ ಕ್ರೈಸ್ತರನ್ನು ಫಾದರ್ ನೋಯಿಸಿದ್ದಾರೆ.ಅವರನ್ನು ಬೇರೆಡೆ ವರ್ಗಾಯಿಸದಿದ್ದರೆ ನಾವು ಚರ್ಚ್ ಗೇ ಕಾಲಿಡಲ್ಲ ಅಂತಿದಾರೆ ಈ ಕುಟುಂಬದವರು.ಮುಂದೇನಾಗುತ್ತೋ ಕಾದು ನೋಡಬೇಕು.

Edited By : Nagesh Gaonkar
Kshetra Samachara

Kshetra Samachara

25/10/2021 05:57 pm

Cinque Terre

18.39 K

Cinque Terre

12

ಸಂಬಂಧಿತ ಸುದ್ದಿ