ಉಡುಪಿ: ಕಳೆದ 15 ವರ್ಷಗಳಿಂದ ನಾನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಬೆಳವಣಿಗೆ ಸಹಿಸಲಾಗದ ಕೆಲವರು ಫೋನ್ ಮಾಡಿ ಬೆದರಿಕೆ ಕರೆಗಳನ್ನು ಹಾಕುತ್ತಿದ್ದಾರೆ. ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದು ರಾಜ್ಯ ಅಲ್ಪಸಂಖ್ಯಾತ ಹಿತರಕ್ಷಣಾ ವೇದಿಕೆ ಮಹಿಳಾ ಘಟಕದ ಉಡುಪಿ ಜಿಲ್ಲಾಧ್ಯಕ್ಷೆ ತಬಸ್ಸುಮ್ ಪಬ್ಲಿಕ್ ನೆಕ್ಸ್ಟ್ ಗೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಿಳಿಸಿಕೊಡುವಲ್ಲಿ ನಾನು ಸಹಾಯ ಮಾಡುತ್ತಿದ್ದೇನೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಸರಕಾರದ ಸಹಾಯಧನಗಳನ್ನು ಜನರಿಗೆ ತಲುಪಿಸುವ ಸೇವೆ ನೀಡುತ್ತಿದ್ದೇನೆ. ಈ ಚಟುವಟಿಕೆಗಳಿಗೆ ನನ್ನದೇ ಧರ್ಮದ ಕೆಲವರಿಂದ ಬೆದರಿಕೆಯಿದೆ ಎಂದು ತಬಸ್ಸುಮ್ ಆರೋಪ ಮಾಡಿದ್ದಾರೆ.
17 ವರ್ಷಗಳ ಹಿಂದೆ ಮದುವೆಯಾಗಿ ಶಿವಮೊಗ್ಗದಿಂದ ಉಡುಪಿಗೆ ಬಂದಿದ್ದೇನೆ ನಾನೀಗ ಉಡುಪಿಯ ವಾಸಿ. ಬೆದರಿಕೆಗಳಿಗೆ ಜಗ್ಗುವುದಿಲ್ಲ. ಕಷ್ಟದಲ್ಲಿರುವವರಿಗೆ ನಾನು ನಿರಂತರ ಸಹಾಯ ಮಾಡುತ್ತೇನೆ. ನಿಮಗೆ ತಾಕತ್ತಿದ್ದರೆ ನನ್ನ ಸಮಾಜಸೇವೆಯನ್ನು ನಿಲ್ಲಿಸಿ ಎಂದು ಸವಾಲು ಹಾಕಿದ್ದಾರೆ. ಫೋನ್ ಕರೆ ಮಾಡಿದವರ ಹೆಸರು ವಿಳಾಸ ಪತ್ತೆ ಮಾಡಿ, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
Kshetra Samachara
24/09/2021 12:27 pm