ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಉದಯಪುರ ಕೊಲೆ: ಇದು ಮೂಢರು, ಮುಟ್ಟಾಳರು ಮಾಡಿದ ಕೆಲಸ; ಅಶ್ವಥ್ ನಾರಾಯಣ

ಉದಯಪುರದಲ್ಲಿ ನಡೆದಿರುವ ಘಟನೆ ನಿಜಕ್ಕೂ ಖಂಡನೀಯ, ಇದ್ಯಾವುದಕ್ಕೂ ನಾವು ಜಗ್ಗಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು , ನಾವು ವಸುದೈವ ಕುಟುಂಬಕಂ ಕಲ್ಪನೆಯೊಂದಿಗೆ ವಿಶ್ವದೊಂದಿಗೆ ಶಾಂತಿಯಿಂದ ಬಾಳುತ್ತಿದ್ದೇವೆ. ಅಮಾಯಕನ ಕುತ್ತಿಗೆ ಕಡಿಯುವ ಮೂಲಕ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದಿಲ್ಲ.ಈ ಕೃತ್ಯ ಎಸಗಿದ ವ್ಯಕ್ತಿಗಳು ತಮ್ಮ ಮನಸ್ಥಿತಿಯನ್ನು ಈ ಕ್ರೌರ್ಯದ ಮೂಲಕ ಪ್ರದರ್ಶಿಸಿದ್ದಾರೆ. ಇದು ಅವರ ವಿನಾಶ, ಆ ವ್ಯಕ್ತಿಗಳ ವಿನಾಶ ಎಂದರು.

ಧರ್ಮದ ಪರವಾಗಿ ಒಳ್ಳೆಯ ಸಂದೇಶ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲ ರೀತಿಯ ಭಾವನೆ, ಸಂಸ್ಕೃತಿ, ಧರ್ಮವನ್ನು ಕಾಪಾಡಿಕೊಂಡು ಅನುಷ್ಠಾನ ಮಾಡಿ ನಡೆಸಿಕೊಂಡು ಹೋಗಲು ಅವಕಾಶವಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾವ ಧರ್ಮದಲ್ಲೂ ಹೇಳಿಲ್ಲ. ಅಧರ್ಮಿಗಳು, ಮೂಢರು, ಮುಟ್ಟಾಳರು ಇದನ್ನು ಮಾಡಿದ್ದಾರೆ ಎಂದ ಅವರು, ಪ್ರಧಾನಿಯವರ ಒಂದು ಕೂದಲು ಮುಟ್ಟಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Edited By :
PublicNext

PublicNext

29/06/2022 05:50 pm

Cinque Terre

53.57 K

Cinque Terre

6

ಸಂಬಂಧಿತ ಸುದ್ದಿ