ಮಂಗಳೂರು: ರಾಜ್ಯದಲ್ಲಿ ಶೀಘ್ರವೇ ಕೇಸರಿ ಒಕ್ಕೂಟ ಅಸ್ತಿತ್ವಕ್ಕೆ ಬರಲಿದೆ. ಈ ಒಕ್ಕೂಟದ ಅಡಿಯಲ್ಲಿ ಮುಂದಿನ ವಿಧಾನಸಭೆಯಲ್ಲಿ ನಾವು ಸ್ಪರ್ಧಿಸ್ತೀವಿ ಅಂತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದಾರೆ.
ಅವರು ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ತರುವುದೇ ನಮ್ಮ ಉದ್ದೇಶ. ಯೋಗಿ ಆದಿತ್ಯನಾಥ್ ಮೂಲತಃ ಬಿಜೆಪಿಯವರಲ್ಲ. ಅವರು ಹಿಂದೂ ಮಹಾಸಭಾದವರು. ಪ್ರಮೋದ್ ಮುತಾಲಿಕ್ ಅವರನ್ನೂ ಸೇರಿಸಿಕೊಂಡು ಈ ಕೇಸರಿ ಒಕ್ಕೂಟ ರಚನೆಯಾಗುತ್ತದೆ.
ಕೆಲವರು ನಮ್ಮಲ್ಲಿ "ನೀವು ಬಿಜೆಪಿಯನ್ನು ಮಾತ್ರ ದೂರುತ್ತೀರಿ, ಕಾಂಗ್ರೆಸ್ಸನ್ನು ಯಾಕೆ ದೂರುತ್ತಿಲ್ಲ" ಎಂದು ಪ್ರಶ್ನೆ ಮಾಡುತ್ತಾರೆ. "ನಾವು ಮಾರುಕಟ್ಟೆಗೆ ಹೋದಾಗ ಒಳ್ಳೆಯ ತರಕಾರಿ ಬಗ್ಗೆ ಮಾತನಾಡುತ್ತೀವಿ. ಕೊಳಕು ತರಕಾರಿ ಬಗ್ಗೆ ನಾವು ಮಾತನಾಡಲ್ಲ. ಡ್ಯಾಮೇಜ್ ಆದ ತರಕಾರಿಯನ್ನು ನಾವು ಕೊಂಡುಕೊಳ್ಳಲ್ಲ. ಹಾಗೆಯೇ ದೇಶದಲ್ಲಿ ಕಾಂಗ್ರೆಸ್ ಡ್ಯಾಮೇಜ್ ಆಗಿರುವ ಪಕ್ಷ" ಎಂದು ವ್ಯಂಗ್ಯವಾಡಿದರು.
Kshetra Samachara
02/08/2022 09:24 pm