ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಗ್ರಾಪಂ ಕಟ್ಟಡದಲ್ಲೇ ಗೃಹಪ್ರವೇಶ ಮಾಡಿ ವಾಸವಾದ ಸದಸ್ಯೆ!

ಬೆಳ್ತಂಗಡಿ: ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಪಂಚಾಯತ್ ಕಟ್ಟಡದಲ್ಲಿ ಪಂಚಾಯತ್ ಸದಸ್ಯೆಯೋರ್ವರೇ ಒಲೆ ಉರಿಸಿ ಗೃಹಪ್ರವೇಶ ಮಾಡಿದ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ!

ಪಂಚಾಯತ್ ಆಡಳಿತ ಅಧಿಕಾರಿಗಳೊಂದಿಗೆ ಸೇರಿ ತನ್ನ ಹೆಸರಿನಲ್ಲಿರುವ ಭೂಮಿಯಲ್ಲಿ ಅಕ್ರಮವಾಗಿ ಪಂಚಾಯತ್ ಕಟ್ಟಡ ನಿರ್ಮಿಸಿದ್ದಾರೆ ಎಂದು ಆರೋಪಿಸಿರುವ ಈ ಮಹಿಳೆ ಯಾವುದೇ ಕಾರಣಕ್ಕೂ ತನ್ನ ಭೂಮಿಯನ್ನು ಪಂಚಾಯತ್ ಗೆ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಪಂ ವ್ಯಾಪ್ತಿಯ ಬಾಜಾರು ಎಂಬಲ್ಲಿ ತೆಕ್ಕಾರು ಗ್ರಾಪಂಗಾಗಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಈಗಾಗಲೇ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ಹಂತಕ್ಕೂ ತಲುಪಿದೆ.

ಆದರೆ, ಏಕಾಏಕಿ ಪಂಚಾಯತ್ ಸದಸ್ಯೆ ಯಮುನಾ ನಾಯ್ಕ ಈ ಕಟ್ಟಡದಲ್ಲಿ ಒಲೆ ಉರಿಸಿ, ಗೃಹಪ್ರವೇಶ ಮಾಡಿ ತನ್ನ ಕುಟುಂಬ ಸದಸ್ಯರೊಂದಿಗೆ ವಾಸಿಸಲು ಆರಂಭಿಸಿದ್ದಾರೆ. ಯಮುನಾ ನಾಯ್ಕರ ಪ್ರಕಾರ ತೆಕ್ಕಾರು ಗ್ರಾಪಂ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದ ಭೂಮಿ ತನ್ನ ಹೆಸರಲ್ಲಿದ್ದು, 1980 ರಲ್ಲಿ ಯಮುನಾ ಪತಿ ನೇಮು ನಾಯ್ಕರಿಗೆ ಸರಕಾರ, ಪರಿಶಿಷ್ಟ ಪಂಗಡ ಕೋಟಾದಡಿ ಈ ಜಾಗ ಮಂಜೂರು ಮಾಡಿದೆ.

ಸರ್ವೆ ನಂ. 103/1 A ಜಾಗದಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಯಮುನಾ ನಾಯ್ಕ ಜಾಗ ಬಿಟ್ಟು ಕೊಟ್ಟಿದ್ದು, ಇದೀಗ ಅಂಗನವಾಡಿ ಪಕ್ಕದಲ್ಲೇ ತೆಕ್ಕಾರು ಗ್ರಾಪಂ ತನ್ನ ನೂತನ ಕಚೇರಿಗಾಗಿ ಕಟ್ಟಡ ಕಾಮಗಾರಿ ನಡೆಸುತ್ತಿದೆ. ಪಂಚಾಯತ್ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದ ಸಂದರ್ಭದಲ್ಲೇ ಯಮುನಾ ನಾಯ್ಕ ಪಂಚಾಯತ್ ನಿರ್ಧಾರಕ್ಕೆ ಸಾಮಾನ್ಯ ಸಭೆಯಲ್ಲೇ ತನ್ನ ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ, ಪಂಚಾಯತ್ ಆಡಳಿತ ಮಂಡಳಿ ಯಮುನಾ ಅವರ ಆಕ್ಷೇಪವನ್ನು ಮಾನ್ಯ ಮಾಡದೆ, 2019 ರಲ್ಲಿ ಕಟ್ಟಡ ಕಟ್ಟುವ ಕಾಮಗಾರಿ ಆರಂಭಿಸಿತ್ತು. ಈ ನಡುವೆ ಯಮುನಾ, ಪುತ್ತೂರು ಸಹಾಯಕ ಆಯುಕ್ತರಿಗೆ ಈ ನಿರ್ಧಾರದ ವಿರುದ್ಧ ದೂರನ್ನೂ ಸಲ್ಲಿಸಿದ್ದರು.

Edited By : Shivu K
Kshetra Samachara

Kshetra Samachara

02/03/2022 06:23 pm

Cinque Terre

21.05 K

Cinque Terre

2

ಸಂಬಂಧಿತ ಸುದ್ದಿ