ಉಡುಪಿ: ಎಸ್ ಡಿಪಿಐ ಜಿಲ್ಲಾಧ್ಯಕ್ಷರ ಹೊಟೇಲ್ ತೆರವು ಪ್ರಕರಣದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡಿದೆ.ಅಕ್ರಮ ಕಟ್ಟಡದ ಹೆಸರಲ್ಲಿ ಜಿಲ್ಲಾಧ್ಯಕ್ಷರ ಕಟ್ಟಡ ತೆರವು ಮಾಡಿದ್ದಾರೆ.ಇದು ಜಾಮಿಯಾ ಮಸೀದಿಗೆ ಸೇರಿದ ಕಟ್ಟಡವಾಗಿದ್ದು,ನಗರದಲ್ಲಿ ಜಾಮಿಯಾ ಮಸೀದಿಯ ಕಟ್ಟಡ ಮಾತ್ರ ಅನಧಿಕೃತವಾ? ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ,ನಿಮಗೆ ಧೈರ್ಯ ಇದ್ದರೆ, ಎಂಎಲ್ ಎ ಅವರು ಶ್ವೇತ ಪತ್ರ ಹೊರಡಿಸಲಿ. ಈ ಕಟ್ಟಡಕ್ಕೆ ಪರವಾನಗಿ ಕೊಟ್ಟಿದ್ದೀರಿ, ತೆರಿಗೆ ಪಡೆದಿದ್ದೀರಿ.ಹೊಟೇಲ್ ವಿಸ್ತರಣೆ ಮಾಡಿದ್ದಾರೆ ನಿಜ.
ಹೆಚ್ಚುವರಿ ದಂಡ ಕಟ್ಟಿ ಸಕ್ರಮ ಕಟ್ಟಡ ಮಾಡಬಹುದಿತ್ತು.ಆದರೆ ದ್ವೇಷದ ರಾಜಕಾರಣಕ್ಕೆ ಮಸೀದಿಯ ಕಟ್ಟಡ ಬಲಿಯಾಗಿದೆ. ಈ ಮೂಲಕ ನಿಮ್ಮ ವಿರುದ್ದದ ಸೈದ್ದಾಂತಿಕ ಹೋರಾಟದ ಧ್ವನಿ ಅಡಗಿಸಲು ಸಾಧ್ಯವಿಲ್ಲ .ಕ್ಷುಲ್ಲಕ ರಾಜಕೀಯ,ಮಾಡಬೇಡಿ.
ವಿಚಾರದಿಂದ ಎದುರಿಸುವ ಧೈರ್ಯ ನಿಮಗೆ ಇಲ್ಲ.ಬಿಜೆಪಿ ಅಕ್ರಮವಾಗಿ ರಾಜ್ಯಾಡಳಿತ ಮಾಡುತ್ತಿಲ್ಲವೇ?
ನಿಮ್ಮದು ಅಕ್ರಮ ಸರ್ಕಾರ, ನಿಮಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
28/03/2022 04:03 pm