ಉಡುಪಿ: ಕರಾವಳಿಯಲ್ಲಿ ಮುಸಲ್ಮಾನರಿಗೆ ಹಾಕಿರುವ ವ್ಯಾಪಾರ ಬಹಿಷ್ಕಾರವನ್ನು ನೈಜ ಹಿಂದೂಗಳು ಒಪ್ಪುವುದಿಲ್ಲ.ಇದು ಸಂಘಪರಿವಾರದ ಕೆಲವೇ ಜನರ ಕೃತ್ಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ,ಮುಸ್ಲಿಂ ಮುಖಂಡ ಅನ್ಸಾರ್ ಅಹಮದ್ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ದೇಶದ ಎಲ್ಲ ಹಿಂದೂಗಳು ಇದನ್ನು ಒಪ್ಪಲು ಸಾಧ್ಯವೇ ಇಲ್ಲ.ಕಾಪು ಶಾಸಕ ಲಾಲಾಜಿ ಮೆಂಡನ್ ಅವರು ಮಾಡಿದ್ದಕ್ಕೆ ನಾವು ಮಾಡುತ್ತಿದ್ದೇವೆ ಎನ್ನುತ್ತಾರೆ.ಮುಖ್ಯಮಂತ್ರಿಗಳು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎನ್ನುತ್ತಿದ್ದಾರೆ.ಜನಪ್ರತಿನಿಧಿಗಳಾಗಿ ಇವರು ಇಂತಹ ಹೇಳಿಕೆ ನೀಡುವುದು ಸರಿ ಅಲ್ಲ.ಕೆಲ ಸಮಯದ ಹಿಂದೆ ಗಂಗೊಳ್ಳಿಯಲ್ಲಿ ಮುಸಲ್ಮಾನರು ಮೀನು ಖರೀದಿಗೆ ಬಹಿಷ್ಕಾರ ಹಾಕಿದ್ದರು ಎಂದು ಹೇಳುತ್ತಾರೆ. ಅದನ್ನೂಕೂಡ ನಾನು ಸಮರ್ಥಿಸಿಕೊಳ್ಳುವುದಿಲ್ಲ.ಸಹಬಾಳ್ವೆಯಿಂದ ಜೀವನ ಸಾಗಿಸುವುದು ಇವತ್ತಿನ ತುರ್ತಾಗಿದೆ ಎಂದು ಅವರು ಹೇಳಿದ್ದಾರೆ.
PublicNext
25/03/2022 07:06 pm