ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಘೋಷಣೆಗಳಲ್ಲೇ ಕಾಲಕಳೆದ ರಾಜ್ಯ ಸರ್ಕಾರದಿಂದ ಬಡವರಿಗೆ ಅನ್ಯಾಯ: ರಮಾನಾಥ ರೈ

ಬಂಟ್ವಾಳ: ಬಡವರ, ಕೂಲಿ ಕಾರ್ಮಿಕರ, ಕೃಷಿಕರ, ನೆರೆ ಪೀಡಿತರ ಹಾಗೂ ಜನ ಸಾಮಾನ್ಯರ ಪರ ರಾಜ್ಯ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಆರೋಪಿಸಿ ರಾಜ್ಯ ಬಿಜೆಪಿ ಸರಕಾರದ ವಿರುದ್ದ ಬೃಹತ್ ಪ್ರತಿಭಟನೆ ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ನಡೆಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಬಿಜೆಪಿ ಸರ್ಕಾರ ಬಂದ ಬಳಿಕ ಯಾವ ಬಡವನಿಗೂ ಮನೆ ಸಿಕ್ಕಿಲ್ಲ. ಕಳೆದ ಎರಡು ವರ್ಷದಿಂದ ಅಂತ್ಯ ಸಂಸ್ಕಾರಕ್ಕೆ ನೀಡುವ ಹಣವನ್ನೂ ಈ ಸರಕಾರ ನೀಡುತ್ತಿಲ್ಲ, ಪೊಲೀಸರಿಗೆ ನೀಡುತ್ತಿದ್ದ ಭತ್ಯೆ ನಿಲ್ಲಿಸಿದ್ದು, ಕೇವಲ ಘೋಷಣೆಯನ್ನಷ್ಟೇ ಮಾಡುತ್ತಿದೆ ಎಂದರು.

ಬಂಟ್ವಾಳ ಪುರಸಭೆಯ ಮೀಸಲಾತಿಗಾಗಿ ನಾವು ಕೋರ್ಟ್ ಗೆ ಹೋಗುವುದಿಲ್ಲ ಎಂದ ಅವರು, ಮರಳುಗಾರಿಕೆ ಅನಧಿಕೃತವಾಗಿ ನಡೆಯುತ್ತಿದೆ. 2 ಸಾವಿರ ರೂ.ಗೆ ಮರಳು ಎಂದ ಬಿಜೆಪಿ ನಾಯಕರ ಬೌದ್ಧಿಕ ಮಟ್ಟ ಎಷ್ಟಿದೆ ಎಂದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.

ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಪರ್ಸಂಟೇಜ್ ಸರಕಾರ ನಡೆಯುತ್ತಿದೆ. ಸರಕಾರ ಜನರ ಸಮಸ್ಯೆಗೆ ಸ್ಪಂದಿಸುವ ಬದಲು ಜನರ ಮೇಲೆ ಸವಾರಿ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಕಾನೂನು ಚೌಕಟ್ಟನ್ನು ಮೀರಿ ಮರಳು ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಪಂ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ, ರಾಜ್ಯ ಸರ್ಕಾರ ಪೊಳ್ಳು ಆಶ್ವಾಸನೆ ನೀಡುತ್ತಾ, ಯಾವುದೇ ಸೌಲಭ್ಯ ನೀಡದೆ ಕೇವಲ ಭರವಸೆ ಮೂಲಕ ಕಾರ್ಯಭಾರ ಮಾಡುತ್ತಿದೆ ಎಂದರು.

ಪ್ರಮುಖರಾದ ಬಿ.ಎಂ.ಅಬ್ಬಾಸ್ ಆಲಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ ಪೂಜಾರಿ, ಸುದರ್ಶನ ಜೈನ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ಪದ್ಮನಾಭ ರೈ, ಪ್ರಶಾಂತ್ ಕುಲಾಲ್, ಮಾಯಿಲಪ್ಪ ಸಾಲ್ಯಾನ್, ಚಿತ್ತರಂಜನ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಲೋಲಾಕ್ಷ ಶೆಟ್ಟಿ, ಲುಕ್ಮಾನ್, ಮಲ್ಲಿಕಾ ಪಕ್ಕಳ, ವೆಂಕಪ್ಪ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಜೆಸಿಂತಾ ಡಿಸೋಜ, ಜಗದೀಶ್ ಕುಂದರ್, ಐಡಾ ಸುರೇಶ್, ಮಹಮ್ಮದ್ ನಂದರಬೆಟ್ಟು, ಮಧುಸೂದನ್ ಶೆಣೈ, ಸಂಜೀವ ಪೂಜಾರಿ, ವಾಸು ಪೂಜಾರಿ, ಗಂಗಾಧರ್ ಪೂಜಾರಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

22/09/2020 03:54 pm

Cinque Terre

35.05 K

Cinque Terre

2

ಸಂಬಂಧಿತ ಸುದ್ದಿ