ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ:ಬಿ.ಸಿ.ರೋಡ್: 1 ಕೋಟಿ ರೂ. ವೆಚ್ಚದಲ್ಲಿ ಬಿ.ಮೂಡ ಸರ್ಕಾರಿ ಪ.ಪೂ. ಕಾಲೇಜಿಗೆ ಹೊಸ ಕಟ್ಟಡ; ಶಾಸಕ ರಾಜೇಶ್ ನಾಯ್ಕ್ ಶಿಲಾನ್ಯಾಸ

ಬಂಟ್ವಾಳ: ಬಿ.ಸಿ.ರೋಡಿನ ಗೂಡಿನಬಳಿಯಲ್ಲಿರುವ ಬಿ.ಮೂಡ ಸರ್ಕಾರಿ ಪ.ಪೂ. ಕಾಲೇಜಿಗೆ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ಕೊಠಡಿ ಮತ್ತು ಶೌಚಾಲಯ ಒಳಗೊಂಡ ಸುಮಾರು 1 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶುಕ್ರವಾರ ಬೆಳಗ್ಗೆ ಶಿಲಾನ್ಯಾಸ ನೆರವೇರಿಸಿದರು.

ನೂತನ ಕಟ್ಟಡದ ನೆಲ ಅಂತಸ್ತಿನಲ್ಲಿ 3 ತರಗತಿ ಕೊಠಡಿ, ಪ್ರಥಮ ಅಂತಸ್ತಿನಲ್ಲಿ 2 ಪ್ರಯೋಗಶಾಲೆ ಕೊಠಡಿ ನಿರ್ಮಾಣ ಹಾಗೂ ಮಹಿಳಾ ಶೌಚಾಲಯ ನಿರ್ಮಿಸುವ ಕುರಿತು ಮಂಜೂರಾದ ಅಂದಾಜು ಪಟ್ಟಿಯಲ್ಲಿದೆ.

ಇದೇ ವೇಳೆ ಪೆಟ್ರೋನೆಟ್ ಕಂಪನಿ ಸಿಎಸ್ ಆರ್ ನಿಧಿಯಿಂದ ಕೊಡುಗೆ ನೀಡಿದ ವಿಜ್ಞಾನ ಪ್ರಯೋಗಾಲಯದ ಎರಡು ಕೊಠಡಿ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕೊರೊನಾವನ್ನು ದೇಶ ಸಮರ್ಥವಾಗಿ ಎದುರಿಸುತ್ತಿದ್ದು, ಇಂಥ ಕಠಿಣ ಸಂದರ್ಭದಲ್ಲೂ ವಿದ್ಯಾರ್ಥಿಗಳಿಗೆ ಬೇಕಾದ ಅನುಕೂಲತೆ ಸರ್ಕಾರ ಕಲ್ಪಿಸುತ್ತಿದ್ದು, ಇದರ ಸದುಪಯೋಗ ಪಡೆಯಬೇಕೆಂದರು.

ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಗುತ್ತಿಗೆದಾರರಾದ ಜಗದೀಪ್ ಡಿ.ಸುವರ್ಣ, ಪೆಟ್ರೋನೆಟ್ ಸಂಸ್ಥೆ ಸ್ಟೇಶನ್ ಇನ್ ಚಾರ್ಜ್ ರಾಜನ್ ಜಿ., ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ, ಪ್ರಿನ್ಸಿಪಾಲ್ ಡಿ.ಯೂಸುಫ್, ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ. ಶ್ಯಾಮ ಭಟ್, ಸುಷ್ಮಾ ಚರಣ್, ಶ್ರೀನಿವಾಸ ಪೂಜಾರಿ ಮೇಲ್ಕಾರ್, ಮಹಮ್ಮದ್ ಗೂಡಿನಬಳಿ, ಸುರೇಶ್ ಸಾಲಿಯಾನ್, ಯಶೋದಾ, ಸುಜಾತಾ, ಹರಿಶ್ಚಂದ್ರ ಚಿಕ್ಕಯ್ಯಮಠ, ಸಚಿನ್, ದಿನೇಶ್ ಅಮ್ಟೂರು, ಭರತ್, ಪದ್ಮನಾಭ ಗಟ್ಟಿ, ಪ್ರಮುಖರಾದ ಸುದರ್ಶನ ಬಜ, ಪ್ರಮೋದ್ ಅಜ್ಜಿಬೆಟ್ಟು, ಪ್ರದೀಪ್ ಅಜ್ಜಿಬೆಟ್ಟು, ಪಿಡಬ್ಲ್ಯುಡಿ ಎಂಜಿನಿಯರ್ ಅಮೃತ್ ಕುಮಾರ್, ಉಪನ್ಯಾಸಕರಾದ ದಾಮೋದರ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ಯೂಸುಫ್ ಸ್ವಾಗತಿಸಿ, ವಂದಿಸಿದರು.

Edited By : Nagesh Gaonkar
Kshetra Samachara

Kshetra Samachara

18/09/2020 01:50 pm

Cinque Terre

27.13 K

Cinque Terre

0