ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಲಿಗ್ರಾಮ: ಅಟಲ್ ಜೀ ವಿಚಾರಧಾರೆ, ಆದರ್ಶ ನಮಗೆಲ್ಲ ಮಾದರಿ; ಸಚಿವ ಕೋಟ

ಕೋಟ: ಬಿಜೆಪಿ ಮಹಾಶಕ್ತಿ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಸಾಲಿಗ್ರಾಮ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಸಾಲಿಗ್ರಾಮ ಬಸ್ ನಿಲ್ದಾಣ ಸಮೀಪ ಜರುಗಿತು.

ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಟಲ್ ಜೀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಅಟಲ್ ಜೀ ಅವರನ್ನು ನೆನಪಿಸಿಕೊಳ್ಳುವುದೇ ನನ್ನ ಭಾಗ್ಯ. ಅವರ ವಿಚಾರಧಾರೆ, ಆದರ್ಶ ಕಾರ್ಯಕರ್ತರಿಗೆ ತಲುಪಿಸುವ ಮೂಲಕ ಅರ್ಥಪೂರ್ಣವಾಗಿಸಲು ಪಕ್ಷದ ಸ್ಥಳೀಯ ಮಟ್ಟದ ಮುಖಂಡರ ಕಾರ್ಯ ಶ್ಲಾಘನೀಯ.

ಅಟಲ್ ಜೀ ಈ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಪ್ರಧಾನಿಯಾಗಿದ್ದಾರೆ. ಅವರ ಜನ್ಮದಿನಾಚರಣೆ ದಿನದಂದು ರೈತಾಪಿ ವರ್ಗಕ್ಕೆ ಬಹುದೊಡ್ಡ ಕೊಡುಗೆಯನ್ನು ಅವರ ಶಿಷ್ಯ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ರೈತರ ಖಾತೆಗಳಿಗೆ ಏಕಕಾಲದಲ್ಲಿ 2 ಸಾವಿರ ರೂ. ನೀಡಿ ಅರ್ಥಪೂರ್ಣ ದಿನಾಚರಣೆಯಾಗಿಸಿದ್ದಾರೆ. ಅಲ್ಲದೆ, ಅವರ ಕಲ್ಪನೆಯ ಕಾರ್ಯ ಯೋಜನೆಯಾದ ರೈತ ಮಸೂದೆಯನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಮಂಡಿಸುವ ಮೂಲಕ ಅವರ ಕನಸು ನನಸಾಗಿಸಿದ್ದಾರೆ. ಇಂದು ರೈತ ಬೆಳೆದ ಯಾವುದೇ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಿ ಬದುಕಬಹುದು ಎಂದು ತೋರಿಸಿದರು ಎಂದರು.

Edited By : Nagesh Gaonkar
Kshetra Samachara

Kshetra Samachara

25/12/2020 09:17 pm

Cinque Terre

13.91 K

Cinque Terre

1

ಸಂಬಂಧಿತ ಸುದ್ದಿ