ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಕ್ಲಾಡಿ ಗ್ರಾಮ ಪಂಚಾಯಿತಿ ಮಿನಿ ಸಮರ

ಬಗ್ವಾಡಿ ಮಹಿಷಾಸುರ ಮರ್ದಿನಿಯ ಭಕ್ತ, ಇದೀಗ ಪಂಚಾಯಿತಿ ಮಿನಿಸಮರ ಅಖಾಡದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ,

ರಾಜಕೀಯ ಪಕ್ಷದಲ್ಲಿ ಯುವ ನಾಯಕರು ಇದೀಗ ಪಂಚಾಯಿತಿ ಮಿನಿ ಸಮರಕ್ಕೆ ಸಜ್ಜಾಗುತ್ತಿದ್ದಾರೆ. ಬಿಜೆಪಿಯ ಬೆಂಬಲಿತ ಅಭ್ಯರ್ಥಿಯಾಗಿ ನಾಗರಾಜ ಪೂಜಾರಿ ಇದೀಗ ನೂಜಾಡಿ ಎರಡನೇ ಬಗ್ವಾಡಿ ವಾರ್ಡ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಯುವಕರ ಕಣ್ಮಣಿ, ಹಿಂದೂ ಸಂಘಟನೆಯ ಚತುರ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅಖಾಡದಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಸಂಘ ಪರಿವಾರದಿಂದ ಬೆಳೆದುಬಂದ ಯುವ ನಾಯಕ, ಅಭಿವೃದ್ಧಿ ಕನಸು ಹೊತ್ತು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡು ನಾಯಕತ್ವದ ಗುಣಗಳಿಂದ ಹೊರಹೊಮ್ಮಿದ್ದಾರೆ.

ಹಿಂದೂ ಜಾಗರಣ ವೇದಿಕೆಯಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆ ಈ ಯುವಕನ ಕಣ್ಣಲ್ಲಿ ಎದ್ದು ಕಾಣುತ್ತಿದೆ. ಊರಿನ ಮನೆಮಗ ಮತದಾರರ ಮೇಲೆ ಭರವಸೆಯಿಟ್ಟು, ಮೊದಲ ಬಾರಿಗೆ ರಾಜಕೀಯ ಮಿನಿ ಸಮರಕ್ಕೆ ಸಜ್ಜಾಗಿದ್ದಾರೆ. ಆದರೆ, ಇವರಿಗೆ ಮತದಾರ ಪ್ರಭುವಿನ ಪ್ರಶ್ನೆ ಏನು ಗೊತ್ತಾ ?

Edited By : Nagesh Gaonkar
Kshetra Samachara

Kshetra Samachara

24/12/2020 08:06 pm

Cinque Terre

29.21 K

Cinque Terre

2

ಸಂಬಂಧಿತ ಸುದ್ದಿ