ಉಡುಪಿ: ರಾಜು ಶೆಟ್ಟಿ ಅಂದ್ರೆ ಆಜ್ರಿ ಗ್ರಾಮಪಂಚಾಯಿತಿಯಲ್ಲಿ ಒಂದು ಸಂಚಲನ ಮೂಡಿಸುತ್ತಿರುವ ಹೆಸರಾಗಿದೆ, ಹಿಂದೆಂದೂ ಆಗದ ಚುನಾವಣೆಯ ಒಂದು ವಿಭಿನ್ನ ಬದಲಾವಣೆ ಆಜ್ರಿ ಗ್ರಾಮಪಂಚಾಯಿತಿಯಲ್ಲಿ ಬಿರುಗಾಳಿಯಂತೆ ಬೀಸುತ್ತಿದೆ.
ಬಿಜೆಪಿ ಸಂಘಪರಿವಾರದಿಂದ ಬಂದ ರಾಜು ಶೆಟ್ಟಿಗೆ, ಸ್ಥಳಿಯ ನಾಯಕರಿಂದ ಅನ್ಯಾಯವಾಗಿ ಮನನೊಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ,
ಆದರೆ ತನ್ನ ಊರಿನಲ್ಲಿ ರಾಜು ಶೆಟ್ಟಿಗೆ ತನ್ನದೇ ಆದ ಪ್ರತಿಷ್ಠೆ ವ್ಯಕ್ತಿತ್ವ ಹೊಂದಿಕೊಂಡಿದ್ದಾರೆ, ಬಿಜೆಪಿಯನ್ನು ಕಟ್ಟುವಲ್ಲಿ ಸತತ 30 ವರ್ಷಗಳ ಕಾಲ ಆಜ್ರಿ ಗ್ರಾಮಪಂಚಾಯಿತಿಯಲ್ಲಿ ಶ್ರಮಿಸಿದ್ದಾರೆ.
ಬಿಜೆಪಿಯಲ್ಲಿ ತನಗೆ ಸೀಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ರಾಜು ಶೆಟ್ಟಿ ಕಣಕ್ಕಿಳಿದಾಗ ಮನವೊಲಿಸುವ ಕೆಲಸ ಆಗಿದೆ,
ಆದರೆ ನೇರವಾಗಿ ಹಣಾಹಣಿಗೆ ಇಳಿದಿದ್ದು ಶಾಸಕರು, ರಾಜು ಶೆಟ್ಟಿಯ ವಿರುದ್ಧ ಚುನಾವಣಾ ಅಖಾಡದಲ್ಲಿ ಬಿರುಗಾಳಿಯಂತೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಇದೀಗ ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ,
ಎದುರಾಳಿ ಕಾಂಗ್ರೆಸ್ ಪಕ್ಷದವರು ಗೆದ್ದರೂ ಪರವಾಗಿಲ್ಲ ಪಕ್ಷೇತರ ಅಭ್ಯರ್ಥಿ ರಾಜು ಶೆಟ್ಟಿ ಗೆಲ್ಲಬಾರದು ಎನ್ನುವ ಪ್ರತಿಷ್ಠೆಗೆ ಶಾಸಕರು ಬಿದ್ದಿದ್ದಾರೆ ಎನ್ನುವ ವಿಚಾರ ಮತದಾರರಲ್ಲಿ ಕೇಳಿಬರುತ್ತಿದೆ.
ಒಬ್ಬ ಗ್ರಾಮ ಪಂಚಾಯಿತಿ ತಮ್ಮದೇ ಪಕ್ಷದಲ್ಲಿ ದುಡಿದ ಅಭ್ಯರ್ಥಿಯ ವಿರುದ್ಧ ಮತಯಾಚನೆಗೆ ಶಾಸಕರು ಬರಬೇಕಾಗಿರುವುದು ಅಭ್ಯರ್ಥಿಯ ಸಾಮರ್ಥ್ಯ ಎಷ್ಟಿದೆ ಎಂದು ತಿಳಿದಂತೆಯಾಗಿದೆ.
ಅಬ್ಬಬ್ಬಾ ಗ್ರಾಮ ಪಂಚಾಯಿತಿ ಚುನಾವಣೆ ಅಖಾಡಕ್ಕೆ ಇಂಥದ್ದೊಂದು ಬೆಳವಣಿಗೆ ಬಂದಿರುವುದು ನಂಬಲಾಗದ ಸಂಗತಿ ಯಾಗಿದೆ. ಸಂಘಪರಿವಾರದಲ್ಲಿ ದುಡಿದ ಪಕ್ಷೇತರ ಅಭ್ಯರ್ಥಿ ರಾಜು ಶೆಟ್ಟಿಗೆ ಇದೀಗ ಮತದಾರರ ಅನುಕಂಪ ದಿನೇ ದಿನೇ ಹೆಚ್ಚಾಗುತ್ತಿದೆ.
ಏಕಾಂಗಿಯಾಗಿ ರಾಜು ಶೆಟ್ಟಿ ಆಜ್ರಿ ಗ್ರಾಮ ಪಂಚಾಯಿತಿಯ 3ನೇ ವಾರ್ಡ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ ಮತಯಾಚನೆ ಮಾಡುತ್ತಿದ್ದಾರೆ
ಆದರೆ ಮತದಾರರ ಮೇಲೆ ಭರವಸೆಯಿಟ್ಟು ರಾಜು ಶೆಟ್ಟಿ ಯಾರ ಬಗ್ಗೆ ಟೀಕೆ ಟಿಪ್ಪಣೆ ಮಾಡದೆ ತನ್ನ ಗೆಲುವು ಮತ್ತು ಅಭಿವೃದ್ಧಿಯ ವಿಚಾರವಾಗಿ ಜನರ ಮುಂದೆ ಪ್ರಸ್ತಾಪನೆ ಮಾಡುತ್ತಿರುವುದು ಇನ್ನೊಂದು ವಿಚಾರವಾಗಿದೆ.
ಸಂದೇಶ್ ಶೆಟ್ಟಿ ಆಜ್ರಿ: ಪಬ್ಲಿಕ್ ನೆಸ್ಟ್ ಉಡುಪಿ.
Kshetra Samachara
23/12/2020 01:31 pm