ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಜಿರೆ ಬಾಲಕನ ಅಪಹರಣ ಪ್ರಕರಣ ಬೇಧಿಸಿದ ಪೊಲೀಸರಿಗೆ ದ.ಕ. ಜಿಲ್ಲಾಡಳಿತ ಶಹಬ್ಬಾಸ್ ಗಿರಿ

ಮಂಗಳೂರು: ಉಜಿರೆಯ ಬಾಲಕನ ಅಪಹರಣ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ಪೊಲೀಸರನ್ನು ದ.ಕ. ಜಿಲ್ಲಾಡಳಿತ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ಎಸ್ಪಿ ಲಕ್ಷ್ಮೀ ಪ್ರಸಾದ್ ಮಾತನಾಡಿ, ಇದು ಒಬ್ಬಿಬ್ಬರ ಪ್ರಯತ್ನದಿಂದ ನಡೆದ ಕಾರ್ಯಾಚರಣೆಯಲ್ಲ.

ಇಡೀ ಪೊಲೀಸ್ ತಂಡದ ಕಾರ್ಯಾಚರಣೆಯ ಫಲ.

ಬೆಳ್ತಂಗಡಿ PSI ಇದಕ್ಕಾಗಿ ಎರಡು ದಿನ ನಿದ್ದೆ ಬಿಟ್ಟಿದ್ದರು. ಸ್ಥಳೀಯರ ಸಹಕಾರವೂ ಹೆಚ್ಚು ಉಪಯೋಗಕ್ಕೆ ಬಂದಿದೆ.

ಸ್ಥಳೀಯರು ನೀಡಿದ್ದ ಮಾಹಿತಿ ತನಿಖೆಗೆ ಬಹು ಮುಖ್ಯವಾಗಿತ್ತು. ಪೊಲೀಸರ ಕೆಲಸವನ್ನು ಗುರುತಿಸಿದ್ದಕ್ಕಾಗಿ ಕೃತಜ್ಞರಾಗಿದ್ದೇವೆ ಎಂದರು.

ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ದಿವಾಕರ್ ಪಾಂಡೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

21/12/2020 06:22 pm

Cinque Terre

10.74 K

Cinque Terre

0

ಸಂಬಂಧಿತ ಸುದ್ದಿ