ಉಡುಪಿ: ರಾಷ್ಟ್ರೀಯ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕುಂದಾಪುರ- ಹೊನ್ನಾವರ ಚತುಷ್ಪತ ಹೆದ್ದಾರಿ ಸೇರಿದಂತೆ ದೇಶಾದ್ಯಂತ 33 ರಾಷ್ಟ್ರೀಯ ಹೆದ್ದಾರಿಗಳನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ವಿಡಿಯೋ ಕಾನ್ಫರೆನ್ಸ್‌ನಲ್ಲ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸಿದರು.
ಬಳಿಕ ಮಾತನಾಡಿದ ಅವರು, "ಕುಂದಾಪುರ ಶಾಸ್ತ್ರಿ ವೃತ್ತ ನಿರ್ಮಾಣ ಕಾರ್ಯವು ಹಲವಾರು ಕಾರಣಗಳಿಂದ ವಿಳಂಬವಾಗುತ್ತಿದೆ. ಈ ವೃತ್ತ ಮೂರು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ಕೊರೊನಾ ಕಾರಣ ಎಲ್ಲಾ ನಿರ್ಮಾಣ ಯೋಜನೆಗಳು ನಿಧಾನವಾಗುತ್ತವೆ" ಎಂದು ಮಾಹಿತಿ ನೀಡಿದರು.
"ಮಲ್ಪೆ-ತೀರ್ಥಹಳ್ಳಿ ಕಾರ್ಯದ ಒಂದು ಭಾಗವನ್ನು ಪೂರ್ತಿ ಮಾಡಲಾಗಿದೆ. ಮುಂದಿನ ನಿರ್ಮಾಣ ಕಾರ್ಯಗಳಿಗೆ ಟೆಂಡರ್ ಮಾಡಲಾಗಿದೆ. ಪರ್ಕಳ ಪ್ರದೇಶಕ್ಕೆ ತ್ರಿಡಿ ವಿನ್ಯಾಸವನ್ನು ಮಾಡಲಾಗಿದೆ. ಉಡುಪಿಯಲ್ಲಿ ಭೂಸ್ವಾಧೀನವೇ ಒಂದು ಸಮಸ್ಯೆಯಾಗಿದೆ. ಒಮ್ಮೆ ಭೂಸ್ವಾಧೀನದ ಕಾರ್ಯ ಮುಗಿದರೆ ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗುತ್ತದೆ" ಎಂದು ತಿಳಿಸಿದರು.
Kshetra Samachara
19/12/2020 10:36 pm