ಬಂಟ್ವಾಳ: ಈ ಬಾರಿಯ ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ನಡೆಯಬೇಕು ಎಂದು ಚುನಾವಣಾ ಆಯೋಗ ಹೇಳುತ್ತಲೇ ಬಂದಿದ್ದರೂ ಬಿಜೆಪಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದೆ.
ರಾಜಧರ್ಮವನ್ನು ನಾವು ಪಾಲಿಸುತ್ತಿದ್ದರೆ, ಬಿಜೆಪಿ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.
ಬಂಟ್ವಾಳದಲ್ಲಿ ಅವರು ಮಾಧ್ಯಮಗಳಿಗೆ ಸಂದೇಶ ಬಿಡುಗಡೆ ಮಾಡಿ, ನಾವು ಚುನಾವಣಾ ಆಯೋಗದ ನೀತಿಸಂಹಿತೆ ಪಾಲಿಸಿದ್ದೇವೆ. ಆದರೆ, ಬಿಜೆಪಿ ಸಂಪೂರ್ಣವಾಗಿ ಕಡೆಗಣಿಸಿದೆ.
ಶಾಸಕರ ಭಾವಚಿತ್ರ, ಚಿಹ್ನೆ ಹಾಕಿ ಮನೆ- ಮನೆಗೆ ಕರಪತ್ರ ಹಂಚಿದ್ದಾರೆ. ಪ್ರಜ್ಞಾವಂತ ಮತದಾರರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೂಲ ಕಾಂಗ್ರೆಸಿಗರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುತ್ತಿಲ್ಲ. ಆವತ್ತಿನಿಂದ ಇವತ್ತಿನವರೆಗೂ ನನ್ನೊಂದಿಗೆ ಇದ್ದವರು ಈಗಲೂ ಇದ್ದಾರೆ. ಎರಡು ಅವಧಿಯವರೆಗೆ ನನ್ನ ಜೊತೆಗೆ ಇದ್ದ ಮಾಧವ ಮಾವೆ ಪಕ್ಷ ತ್ಯಜಿಸಿದ್ದಾರೆ.
ನನ್ನ ಜೊತೆ ಇದ್ದವರು ಇವರಿಗೆ ಯಾಕೆ ಜಾಸ್ತಿ ಅವಕಾಶ ಕೊಟ್ಟಿದ್ದೀರಿ ಎಂದು ಉಳಿದವರು ಕೇಳುತ್ತಿದ್ದರೂ ಇವರಿಗೆ ಅವಕಾಶ ಕೊಟ್ಟಿದ್ದೇನೆ. ನಾನು ಯಾವುದೇ ತೊಂದರೆ ಅವರಿಗೆ ಮಾಡಿಲ್ಲ.
ಅವರಿಗೆ ಮಹತ್ವಾಕಾಂಕ್ಷೆ ಇರಬಹುದು, ಅದನ್ನು ನನ್ನಿಂದ ಪೂರೈಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ನನ್ನನ್ನು ಬಿಟ್ಟು ಹೋಗುವುದಿಲ್ಲ. ಇದರಿಂದ ಪಕ್ಷಕ್ಕೆ ಹಿನ್ನಡೆ ಆಗಿಲ್ಲ ಎಂದು ರೈ ಹೇಳಿದರು.
Kshetra Samachara
19/12/2020 08:47 pm