ಅರುಣ್ ನಾಯ್ಕ್ ಮರಾಠಿ ಸಮಾಜದ ಸೇವಾ ಸಂಘದ ಬೆಳಂಜೆ ಗ್ರಾಮ ಸಮಿತಿ ಅಧ್ಯಕ್ಷರಾಗಿ ಸಮಾಜ ಬಾಂಧವರ ಹಿತರಕ್ಷಣೆಗೆ ಶ್ರಮಿಸಿದ್ದಾರೆ. ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದು, ಸ್ಥಾನೀಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕುಚ್ಚೂರು ಗ್ರಾಮ ಪಂಚಾಯಿತಿ ಎರಡನೇ ಮತ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಮುಗ್ಧ ಮನಸ್ಸಿನ ವ್ಯಕ್ತಿತ್ವ ಅವರದ್ದು. ಮಾತು ಕಮ್ಮಿ, ದುಡಿಮೆ ಜಾಸ್ತಿ ಎಂಬಂತೆ ಗ್ರಾಮದ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಬೆಳಂಜೆ ವಾರ್ಡ್ ನ ಪ್ರಗತಿಯ ಕನಸು ಕಂಡ ಯುವಕ ಚುನಾವಣೆಯ ಅಖಾಡಕ್ಕೆ ಧುಮುಕಿದ್ದಾರೆ. ಆದರೆ, ಅಭಿವೃದ್ಧಿಯ ಕನಸುಗಳನ್ನು ಜನರ ಮುಂದೆ ಇಡಲು ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಇವರ ಬಗ್ಗೆ ಊರಿನ ಹಿರಿಯರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಈ ಯುವ ನಾಯಕ ಇದೀಗ ತನ್ನ ಗ್ರಾಮದಲ್ಲಿ ಅಭಿವೃದ್ಧಿಯ ಕನಸು ಹೊತ್ತು ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಇವರ ಜನಪರ ಕಾಳಜಿ ಇವರನ್ನು ಕಾಪಾಡಲಿ ಎಂಬುದೇ ನಮ್ಮ ಆಶಯ.
Kshetra Samachara
19/12/2020 02:24 pm