ಮುಲ್ಕಿ: ಇಲ್ಲಿಗೆ ಸಮೀಪದ ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಂಘ (ರಿ)ದ 2020 21 ನೇ ಸಾಲಿನ ಸದಸ್ಯರ ಸಾಮಾನ್ಯ ಸಭೆಯು ಅಧ್ಯಕ್ಷೆ ಪದ್ಮಿನಿ ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಅವರು ಮಾತನಾಡಿ ಸಂಘದ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಸರೋಜಿನಿ ಮಾತನಾಡಿ ಈ ಸಾಲಿನಲ್ಲಿ ಸಂಘದಲ್ಲಿ 137 ಸದಸ್ಯರಿದ್ದು 3,76,000 ರೂ ನಿವ್ವಳ ಲಾಭ ಬಂದಿದ್ದು ಒಂದು ಲಕ್ಷದ ಎಂಬತ್ತು ಸಾವಿರ ದವರೆಗೆ ಬೋನಸ್ ವಿತರಿಸಲಾಗಿದೆ. ಸದಸ್ಯರಿಗೆ ಶೇ. 16 ಡಿವಿಡೆಂಟ್ ವಿತರಿಸಲಾಗಿದೆ ಎಂದರು. ಸಭೆಯಲ್ಲಿ ಸೊಸೈಟಿಗೆ ಹಾಲು ಹಾಕುವುದನ್ನು ಸ್ಥಗಿತಗೊಳಿಸಿದವರಿಗೆ ಡಿವಿಡೆಂಟ್ ವಿತರಿಸುವ ಕುರಿತು ಚರ್ಚೆ ನಡೆಯಿತು.
2020-21 ನೇ ಸಾಲಿನಲ್ಲಿ ಸೊಸೈಟಿಗೆ ಅತೀ ಹೆಚ್ಚು ಹಾಲು ಹಾಕಿದ ನೆಲೆಯಲ್ಲಿ ಹರಿಣಾಕ್ಷಿ (ಪ್ರ) ವಿಜಯ ಆರ್ ಶೆಟ್ಟಿ( ದ್ವಿ), ಪದ್ಮಿನಿ ವಿ ಶೆಟ್ಟಿ (ತೃ) ಹಾಗೂ ಅತಿ ಹೆಚ್ಚು ಗುಣಮಟ್ಟದ ಹಾಲು ಹಾಕಿದ ಪ್ರಪುಲ್ಲಾ ಸಿ ಶೆಟ್ಟಿ ರವರಿಗೆ ಬಹುಮಾನ ವಿತರಿಸಲಾಯಿತು. ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ವೀಕ್ಷಾ ವಿ ಶೆಟ್ಟಿ, ಶ್ವೇತಾ ಪಿ ಸುವರ್ಣ ರವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷೆ ಪ್ರಪುಲ್ಲಾ ಸಿ ಶೆಟ್ಟಿ, ನಿರ್ದೇಶಕರುಗಳಾದ ಶಾಂತ ವಿಠಲ್ ಶೆಟ್ಟಿ, ಗುಲಾಬಿ ಬಿ ಶೆಟ್ಟಿ, ಶೋಭಾ ವಿ ಶೆಟ್ಟಿ, ಲೀಲಾ ಎಸ್ ಶೆಟ್ಟಿ, ಬೇಬಿ ಕೆ. ವನಿತಾ ವಿ ಶೆಟ್ಟಿ, ಗುಲಾಬಿ ಕೆ ಪೂಜಾರಿ, ವತ್ಸಲಾ ಶೆಟ್ಟಿ, ಶೋಭಾ ಎ ಶೆಟ್ಟಿ ಕಾರ್ಯದರ್ಶಿ ಮಮತಾ ಅನಿಲ್ ಶೆಟ್ಟಿ, ಹಾಲು ಪರೀಕ್ಷಕಿ ತ್ರಿವೇಣಿ, ಸಹಾಯಕಿ ಶೋಭಾ ಬಿ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
17/12/2020 02:59 pm