ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: "ಸಾರಿಗೆ ನೌಕರರ ಬೇಡಿಕೆಯಲ್ಲಿ ತಪ್ಪಿಲ್ಲ, ಆದರೆ ಮುಷ್ಕರಕ್ಕೆ ಇದು ಸಕಾಲವಲ್ಲ"

ಮಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಅವರು ಸಾರಿಗೆ ನೌಕರರು ಕೇಳುವುದರಲ್ಲಿ ತಪ್ಪಿಲ್ಲ, ಆದ್ರೆ ಈಗಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಪ್ರತಿ ತಿಂಗಳ ವೇತನ ಬಿಡುಗಡೆ ಮಾಡುವುದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತಿದೆ. ಈ ಹೋರಾಟ ಇವತ್ತಿನದ್ದಲ್ಲ. ತುಂಬಾ ವರ್ಷಗಳ ಹೋರಾಟವಿದು. ಆದರೆ, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮೂರು ತಿಂಗಳ ಸಂಬಳ ಬಿಡುಗಡೆ ಮಾಡಿದ್ದಾರೆ. ಎಲ್ಲವನ್ನೂ ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ. ಇಂದು ಸಂಜೆಯ ಒಳಗಡೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ನಾನೂ ಒಬ್ಬ ಸರಕಾರಿ ನೌಕರನಾಗಿ ದುಡಿದ ಅನುಭವ ಇದೆ. ಸಾರಿಗೆ ನೌಕರರು ಇಂದಿನ ಕೊರೊನಾ ಕಾಲದ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪ ಸರಕಾರ ಯಾರನ್ನೂ ಹಸಿವಿನಿಂದ ಇರಲು ಬಿಡುವುದಿಲ್ಲ ಎಂದರು.

Edited By : Nagesh Gaonkar
Kshetra Samachara

Kshetra Samachara

13/12/2020 04:22 pm

Cinque Terre

17.66 K

Cinque Terre

2

ಸಂಬಂಧಿತ ಸುದ್ದಿ