ವಿದ್ಯಾರ್ಥಿ ಜೀವನದಲ್ಲಿ ಹೋರಾಟ ಮನೋಭಾವ ಉಳ್ಳ ಸುದರ್ಶನ್ ಶೆಟ್ಟಿ, ಊರಿನ ಅಭಿವೃದ್ಧಿಯ ಕನಸು ಕಂಡು ತನ್ನ ಊರಿನ ಜನತೆಗೆ ನ್ಯಾಯಯುತ ನಾಯಕನಾಗಬೇಕು ಎಂದು ತೊಡೆ ತಟ್ಟಿ ರಾಜಕೀಯಕ್ಕೆ ಲಗ್ಗೆ ಇಟ್ಟಿದ್ದಾರೆ. ಎರಡು ಬಾರಿ ಕೆರಾಡಿ ಗ್ರಾಮ ಪಂಚಾಯಿತಿ ಬೆಳ್ಳಾಲದ ಮೂಡುಮುಂದದ ಎರಡನೇ ವಾರ್ಡ್ ನಲ್ಲಿ ಭರ್ಜರಿ ಜಯ ಗಳಿಸಿ ಜನರ ವಿಶ್ವಾಸಕ್ಕೆ ಪಾತ್ರರಾದರು.
ಅಯ್ಯೋ ಎಂದು ಸಹಾಯಕ್ಕೆ ಬಂದವರಿಗೆ ಇವರು ಕರ್ಣನಂತೆ ಕೈಯಲ್ಲಿ ಇದ್ದಷ್ಟು ಸಹಾಯ ಮಾಡಿ ಜನರ ಪ್ರೀತಿ ಗಿಟ್ಟಿಸಿಕೊಂಡ ಯುವ ಉತ್ಸಾಹಿ ನಾಯಕ. ರಾಜಕೀಯದಲ್ಲಿ ಇದ್ದರೂ ಕೂಡ ಅಜಾತಶತ್ರುವಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಂಡ ಪಂಚಾಯಿತಿ ಸಮರದ ರಣಧೀರ.
ಆಡಳಿತದಲ್ಲಿ ಇರುವ ನಾಯಕನಿಗೆ ಟೀಕೆ -ಟಿಪ್ಪಣಿ ಹೆಚ್ಚು, ಅದು ಸುದರ್ಶನ್ ಶೆಟ್ಟಿಯವರನ್ನು ಕೂಡ ಬಿಡಲಿಲ್ಲ. ಎದುರಾಳಿಯವರು ಈ ಬಾರಿ ಇವರನ್ನು ಸೋಲಿಸಲು ಬೆಳ್ಳಾಲ ಎರಡನೇ ವಾರ್ಡ್ ಗೆ ಅಪಪ್ರಚಾರದ ಸ್ತೋತ್ರ ರೆಡಿ ಮಾಡಿದ್ದಾರೆ ಎನ್ನುವುದು ಇವರ ಅಭಿಪ್ರಾಯ. ಆದರೆ, ಜನರ ಮೇಲೆ ನಂಬಿಕೆ ಇಟ್ಟ ಸುದರ್ಶನ್ ಶೆಟ್ಟಿ, ಈ ಬಾರಿ ಪಂಚಾಯಿತಿ ಮಿನಿ ಸಮರಕ್ಕೆ ಸಜ್ಜಾಗಿದ್ದಾರೆ. ಆದರೆ, ಇವರಿಗೆ ಮತದಾರನ ಪ್ರಶ್ನೆ ಏನು ಗೊತ್ತಾ ?
ಪಂಚಾಯಿತಿ ಮಿನಿ ಸಮರದಲ್ಲಿ ನೀವು ಕೂಡ ಭಾಗವಹಿಸಬೇಕಾದರೆ ಸಂಪರ್ಕಿಸಿ...
ಸಂದೇಶ್ ಶೆಟ್ಟಿ ಆಜ್ರಿ, ಉಡುಪಿ ವರದಿಗಾರ: 9980439498.
Kshetra Samachara
11/12/2020 07:46 pm