ಕಾಪು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಕಾಪು ತಾಲೂಕಿನಲ್ಲಿ ಬಂದ್‌ನ ಯಾವುದೇ ಕುರುಹು ಕಂಡಿಲ್ಲ.ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ಎಂದಿನಂತೆ ಇದ್ದು, ಬಂದ್‌ನ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಕಾಪು ತಾಲೂಕಿನ ಕಾಪು, ಪಾಂಗಾಳ, ಉದ್ಯಾವರ, ಶಂಕರಪುರ, ಶಿರ್ವ ಪಡುಬಿದ್ರಿ, ಹೆಜಮಾಡಿ ಸಹಿತ ಎಲ್ಲ ಪ್ರದೇಶಗಳಲ್ಲಿ ವಾಹನ ಸಂಚಾರ ಅಡೆತಡೆ ಇಲ್ಲದೆ ಎಂದಿನಂತೆ ನಡೆಯುತ್ತಿವೆ. ಅಂಗಡಿ ಮುಂಗಟ್ಟುಗಳೂ ಎಂದಿನಂತೆ ತಮ್ಮ ವ್ಯಾಪಾರ ವ್ಯವಹಾರ ಮಾಡುತ್ತಿದ್ದು, ಈ ಭಾಗದ ಬಹುತೇಕ ಜನರಿಗೆ ಇಂದು ಕರ್ನಾಟಕ ಬಂದ್ ಸುದ್ದಿ ತಿಳಿದೇ ಇಲ್ಲ.
Kshetra Samachara
05/12/2020 04:13 pm