ಉಡುಪಿ: ಕರ್ನಾಟಕ ಬಂದ್ ಗೆ ಇವತ್ತು ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದರೂ ಕೃಷ್ಣನಗರಿ ನಾರ್ಮಲ್ ಆಗಿದೆ .ಎಂದಿನಂತೆ ಬಸ್ ಸಂಚಾರ ನಡೆಸುತ್ತಿವೆ. ಜನಜೀವನ ಕೂಡ ಮಾಮೂಲಿಯಾಗಿದೆ. ಮುಖ್ಯವಾಗಿ ಈ ಭಾಗದಲ್ಲಿ ಯಾವುದೇ ಸಂಘಟನೆಗಳು ಬಂದ್ ಮಾಡುವಂತೆ ಒತ್ತಾಯಿಸುವುದು ಕಂಡುಬಂದಿಲ್ಲ. ಆದರೆ ಕೃಷ್ಣನಗರಿಗೆ ಪ್ರತಿನಿತ್ಯ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಕೃಷ್ಣಮಠಕ್ಕೆ ಆಗಮಿಸುತ್ತಾರೆ.ಆದರೆ ಇಂದು ಭಕ್ತರ ಸಂಖ್ಯೆ ಕಡಿಮೆ ಇದೆ.ಹೀಗಾಗಿ ಉಡುಪಿಯ ಪ್ರಮುಖ ರಸ್ತೆಗಳು ವಾಹನ ಮತ್ತು ಭಕ್ತರಿಂದ ತುಂಬಿರುವ ಬದಲು ಸಂಚಾರ ವಿರಳವಾಗಿದೆ. ಬಸ್ ನಿಲ್ದಾಣಗಳು ಎಂದಿನಂತೆ ಚಟುವಟಿಕೆಯಿಂದ ಕೂಡಿದ್ದರೂ ದೂರದೂರುಗಳಿಂದ ಬರುವ ಭಕ್ತರ ಸಂಖ್ಯೆ ವಿರಳ ಇದೆ. ಇದಕ್ಕೆ ಕಾರಣ ಕರ್ನಾಟಕ ಬಂದ್ ಕರೆ. ಉಳಿದಂತೆ ಜನಜೀವನ ಮಾಮೂಲಿಯಾಗಿದೆ.ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.
Kshetra Samachara
05/12/2020 11:49 am