ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಲು ಹಿಂದೂ ಮಹಾಸಭಾ ಒತ್ತಾಯ

ಮಂಗಳೂರು: ಮಂಗಳೂರಿನ ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನಿಡುವಂತೆ ಅಖಿಲ ಭಾರತ ಹಿಂದು ಮಹಾಸಭಾ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅಖಿಲ ಹಿಂದೂ ಮಹಾಸಭಾ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ, ಆಡಳಿತರೂಢ ಬಿಜೆಪಿ ನೇತೃತ್ವದ ಪಾಲಿಕೆಯುವ ಲೇಡಿಹಿಲ್ ವೃತ್ತದ ಹೆಸರನ್ನ ಬ್ರಹ್ಮಶ್ರೀ ನಾರಾಯಣ ಗುರು ಎಂದು ಮರುನಾಮಕರಣಗೊಳಿಸಲು ಗೊತ್ತುವಳಿ ಮಂಡಿಸಬೇಕು.

ಕಳೆದ ಬಾರಿ ಸಭೆಯಲ್ಲಿ ಈ ವಿಚಾರಕ್ಕೆ ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಆ ಸಂದರ್ಭ ಅದರ ಪರವಾಗಿ ಮಾತನಾಡಬೇಕಿದ್ದ ಬಿಜೆಪಿ ಸದಸ್ಯರು ಮೌನವಾಗಿದ್ದರು.

ಇದು ಬಿಜೆಪಿಯ ಹಿಂದುತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ ಹಿಂದೂ ಮಹಾಸಭಾ ಗುರುಗಳ ಹೆಸರನ್ನ ಇಡಲು ಪಾಲಿಕೆಯನ್ನ ಒತ್ತಾಯಿಸುತ್ತಿದೆ.

ಗ್ರಾಮ ಪಂಚಾಯುತ್ ಚುನಾವಣೆ ಮುಗಿದ ಬಳಿಕ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧವಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಕಮಲಾಕ್ಷ ಪೊಳಲಿ, ಕಮಲಾಕ್ಷ ಎಮ್, ಪ್ರಮೋದ್ ಸ್ವಾಮೀ, ರಾಜೇಶ್ ಪವಿತ್ರನ್ ಮತ್ತಿತ್ತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

02/12/2020 07:41 pm

Cinque Terre

12.43 K

Cinque Terre

1

ಸಂಬಂಧಿತ ಸುದ್ದಿ