ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರು ಗ್ರಾಮ ಪಂಚಾಯುತ್ ಚುನಾವಣೆ ತಯಾರಿ ಬಗ್ಗೆ ಮಾತಾಡಿದ ಎರಡೇ ದಿನಕ್ಕೆ ನಗರದ ಎರಡು ಕಡೆಗಳಲ್ಲಿ ಉಗ್ರರ ಪರ ಗೋಡೆ ಬರಹ ಕಾಣಿಸಿಕೊಂಡಿದ್ದು, ರಾಜ್ಯ ತಲ್ಲಣಗೊಳಿಸುವಂತಹ ಘಟನೆಗೂ ಅವರ ಹೇಳಿಕೆ ಪೂರಕವಾಗಿ ಕಾಣುತ್ತಿದ್ದು , ಇದರ ಹಿಂದಿನ ಮರ್ಮವಾದರೂ ಏನು ಅನ್ನೋದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೆಲ್ಮೆಟ್ ಹಾಕದೇ ಇದ್ದಾಗ ಕೆಲಸ ಮಾಡುವ ಸಿಸಿಟಿವಿಗಳು, ಪೊಲೀಸ್ ಠಾಣೆ ಮೆಲೆ ದಾಳಿ ಮಾಡಿದಾಗ, ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕಿದಾಗ ಸಿಸಿಟಿವಿ ಕೈ ಕೊಡುತ್ತದೆ ಎಂದರೆ ಇದು ಪೊಲಿಸ್ ಇಲಾಖೆ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ. ಈ ಪರಿಸ್ಥಿತಿಯಲ್ಲಿ ಆರೋಪಿಗಳು ಚುನಾವಣೆ ನಂತರ ಬಂಧನವಾದಾರು, ಆದರೆ ಚುನಾವಣೆಗೂ ಮುನ್ನವೇ ಬಂಧಿಸಬೇಕೆನ್ನುವುದು ಹಿಂದೂ ಮಹಾಸಭಾದ ಆಗ್ರಹವಾಗಿದೆ ಎಂದರು.
Kshetra Samachara
02/12/2020 07:39 pm