ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಮೂಡುಬಿದಿರೆ ಮಂಡಲದ ಪ್ರಶಿಕ್ಷಣ ವರ್ಗ 2020 ಪಕ್ಷದ ಆಶಯ, ಉದ್ದೇಶ ನೆನಪಿಸಲು ಪ್ರಶಿಕ್ಷಣ ವರ್ಗ ಅಗತ್ಯ : ಉಮಾನಾಥ ಕೋಟ್ಯಾನ್

ಮೂಡುಬಿದಿರೆ: ಭಾರತವು ಶ್ರೇಷ್ಠ ಸಂಸ್ಕಾರಗಳನ್ನೊಳಗೊಂಡ ದೇಶ. ಭಾರತೀಯ ಶ್ರೆಷ್ಠತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಭಾರತವು ವಿಶ್ವಗುರು ಆಗಬೇಕೆಂದು ಅಂದು ಹಿರಿಯರು ಕಂಡ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನು ಯುವಜನತೆಯ ಮೇಲಿದ್ದು ಬಿಜೆಪಿ ಪಕ್ಷದ ಆಶಯ ಮತ್ತು ಉದ್ದೇಶವನ್ನು ನೆನಪು ಮಾಡಲಿಕ್ಕಾಗಿ ಈ ಪ್ರಶಿಕ್ಷಣವರ್ಗದ ಅಗತ್ಯವಿದೆ ಎಂದು ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಬಿಜೆಪಿ ಮೂಡುಬಿದಿರೆ ಮಂಡಲದ ವತಿಯಿಂದ ಸ್ವರಾಜ್ಯ ಮೈದಾನದ ಬಳಿ ಇರುವ ಕಾಮಧೇನು ಸಭಾಭವನದಲ್ಲಿ ಭಾನುವಾರ ನಡೆದ ಪ್ರಶಿಕ್ಷಣ ವರ್ಗ-2020 ಅನ್ನು ಉದ್ಘಾಟಿಸಿ ಮಾತನಾಡಿದರು.

ಹೊಸ ಕಾರ್ಯಕರ್ತರು ಪಕ್ಷಕ್ಕೆ ಬರುತ್ತಿದ್ದಾರೆ. ಪಕ್ಷದ ಆಶಯವನ್ನು ತಿಳಿಸುವಂತಹ ಕೆಲಸ ನಾಯಕರಿಂದಾಗ ಬೇಕು. ಪಕ್ಷ ಕಟ್ಟಿದ ಹಿರಿಯ ನಾಯಕರು ಮುಂದೇಯೂ ಮೂಡಿ ಬರಬೇಕೆಂಬುದೇ ನಮ್ಮ ಉದ್ದೇಶ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ್ ಆಳ್ವ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಮಂಡಲ ಪ್ರಭಾರಿ ಗಣೇಶ್ ಹೊಸಬೆಟ್ಟು, ಜಿಲ್ಲಾ ಪ್ರಶಿಕ್ಷಣ ಸಹ ಸಂಚಾಲಕ ಸುಧಾಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಿಕ್ಷಣ ವರ್ಗದ ಸಂಚಾಲಕ ಜಯಾನಂದ ಮೂಲ್ಕಿ ಸ್ವಾಗತಿಸಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

29/11/2020 07:19 pm

Cinque Terre

11.49 K

Cinque Terre

0

ಸಂಬಂಧಿತ ಸುದ್ದಿ