ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಪ್ರಮೋದ್ ಮಧ್ವರಾಜ್ ಗೈರು

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಇಂದು ಉಡುಪಿಯಲ್ಲಿ ನಡೆದ ಸಮಾವೇಶಕ್ಕೆ,ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೈರು ಆಗಿದ್ದಾರೆ. ಪ್ರಮೋದ್ ಮಧುರಾಜ್ ಇತ್ತೀಚಿಗೆ,ಜಿಲ್ಲಾ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.ಹಾಗೂ

ಪ್ರಮೋದ್ ಬೆಂಬಲಿಗರಿಂದ ಶಕ್ತಿ ಪ್ರದರ್ಶನ ಪ್ರಯತ್ನ ಮಾಡಲಾಗಿತ್ತು ಸಮಾವೇಶ ಸ್ಥಳದ ಆವರಣದಲ್ಲಿ ಶಕ್ತಿ ಪ್ರದರ್ಶನ ಯತ್ನ ಮಾಡಿದರು ಮತ್ತು ,ಶಾಮಿಯಾನ ಅಳವಡಿಸಿ ಮೌನ ಪ್ರತಿಭಟನೆಗೆ ಸಿದ್ದತೆ ನಡೆಸಲಾಗಿತ್ತು. ಡಿಕೆಶಿ ಆಗಮಿಸುತ್ತಿದ್ದಂತೆ ಜೈ ಕಾರ ಕೂಗಿ ಸಭೆಗೆ ಆಗಮಿಸಿದ ಪ್ರಮೋದ್ ಬೆಂಬಲಿಗರು ಹಾಗೂ ಜಿಲ್ಲಾ ಕಾಂಗ್ರೇಸ್ ವಿರುದ್ದ ಅಸಮಾಧಾಗೊಂಡಿರುವ ಪ್ರಮೋದ್ ಬೆಂಬಲಿಗರು.ಭಾಷಣದಲ್ಲಿ ಡಿಕೆಶಿ ವಾಗ್ಬಾಣ ಮಾಡಿ,ಮನೆಯ ಚೌಕಟ್ಟಿಲ್ಲಿ ಭಿನ್ನಾಭಿಪ್ರಾಯ ಇರುತ್ತೆ ನಿಜ ಆದರೆ,ನನ್ನಿಂದಲೇ ಪಕ್ಷ ಅಂತ ಬ್ಲಾಕ್ ಮೇಲ್ ಮಾಡಬಹುದು ಅಂತ ಭಾವಿಸಿದ್ರೆ ಅದು ಭ್ರಮೆ ಮತ್ತು ಯಾರಾದ್ರೂ ಪಕ್ಷ ಬಿಟ್ಟು ಹೋಗುವವರಿದ್ರೆ ಗೌರವವಾಗಿ ಕಳಸಿಕೊಡೋಣ,ಯಾರೂ ಪರ್ಮನೆಂಟ್ ಅಲ್ಲ, ಕಾಂಗ್ರೇಸ್ ಪಕ್ಷದಲ್ಲಿ ಇರೋದು ಸೌಭಾಗ್ಯ.

ಮೊದಲು ಶಿಸ್ತು ಬೇಕು, ಅಧಿಕಾರ ಎಲ್ಲರಿಗೂ ಸಿಗುತ್ತೆ ಜಿಲ್ಲೆಯಲ್ಲಿ ಒಬ್ರೂ ಶಾಸಕರಿಲ್ಲ ಕಾರ್ಯಕರ್ತರು ಏನ್ ಮಾಡ್ಬೇಕು? ಎಲ್ಲಿ ತ್ಯಾಗ, ಶ್ರಮ‌ ಇಲ್ಲವೋ ಅಲ್ಲಿ ಫಲ ಇಲ್ಲ ಹಿಂದೆ ಆಗಿದ್ದು ಮರೀರಿ ಚಾಡಿ ಹೇಳೋದು ಬಿಡಿ, ನಾನಂತೂ ಯಾವ ಚಾಡಿನೂ ಕೇಳಲ್ಲ ಪ್ರಮೋದ್ ಮಧ್ವರಾಜ್ ಟಾಂಗ್ ನೀಡಿದ ಡಿಕೆಶಿ.

Edited By : Nagesh Gaonkar
Kshetra Samachara

Kshetra Samachara

29/11/2020 06:42 pm

Cinque Terre

15.81 K

Cinque Terre

3

ಸಂಬಂಧಿತ ಸುದ್ದಿ