ಪಡುಬಿದ್ರಿ: ಪಡುಬಿದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಆದಾನಿ ಕಂಪನಿ ವತಿಯಿಂದ ನಿರ್ಮಿಸಲಾದ ಬೆಳಪು ಗ್ರಾಪಂ ವ್ಯಾಪ್ತಿಯ ಯುಸಿವರ್ಸಿಟಿ ರಸ್ತೆಯನ್ನು ಸಂಸ್ಥೆ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು.
ಈ ಸಂದರ್ಭ ಕಿಶೋರ್ ಆಳ್ವ ಮಾತನಾಡಿ, 10 ಲಕ್ಷ ರೂ. ವೆಚ್ಚವನ್ನು ಸಿಎಸ್‍ಆರ್ ಫಂಡ್‍ನಲ್ಲಿ ನೀಡಲಾಗಿದೆ. ಬೆಳಪು ಗ್ರಾ.ಪಂ.ಗೆ ಹಲವಾರು ಯೋಜನೆಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದ್ದಾರೆ.
ಈ ಸಂದರ್ಭ ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ತಾಪಂ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಆದಾನಿ ಜನರಲ್ ಮ್ಯಾನೇಜರ್ ರವಿ ಜೀರೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/11/2020 09:39 pm