ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಅಗತ್ಯವಿದೆ ಸಚಿವ ಡಾ.ಅಶ್ವತ್ಥ್ ನಾರಾಯಣ್ ಹೇಳಿಕೆ.

ಉಡುಪಿ: ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದು ಮುಖ್ಯ. ಹಳ್ಳಿಗಳಿಂದ ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದು ಕೂಡಾ ಹಳ್ಳಿಗಳಲ್ಲಿ ಇರದ ಮೂಲಸೌಲಭ್ಯ ಹಾಗೂ ಅವಕಾಶಗಳ ಕೊರತೆಯಿಂದ. ಹಳ್ಳಿಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ, ಗುಣಮಟ್ಟದ ಸೇವೆಗಳು, ಆರ್ಥಿಕ ಸದೃಢತೆ, ಅವಕಾಶಗಳನ್ನು ಕಲ್ಪಿಸಿಕೊಟ್ಟಾಗ ವಲಸೆ ಪ್ರಮಾಣ ಕಡಿಮೆಯಾಗುತ್ತದೆ. ಸದೃಢವಾದ ದೇಶ ನಿರ್ಮಾಣವಾಗುತ್ತದೆ ಹಾಗೂ ದೇಶಕ್ಕೆ ಸ್ವಾತಂತ್ರ್ಯ ಪೂರ್ವದಲ್ಲಿ ತಿಲಕರ ಕಲ್ಪನೆಯೇ ಸ್ವರಾಜ್ಯ. ಮುಂದೆ ಮಹಾತ್ಮಾಗಾಂಧಿಯವರು ಇದಕ್ಕೆ ಒತ್ತು ನೀಡಿದರು. ಅದೇ ದಾರಿಯಲ್ಲಿ ಭಾರತೀಯ ಜನತಾ ಪಕ್ಷ ಗ್ರಾಮ ಸ್ವರಾಜ್ಯಕ್ಕೆ ದೊಡ್ಡ ಸಂಚಲನ ಮೂಡಿಸುವ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ದಿಕ್ಕೆ ಕೇಂದ್ರ ಹಲವು ಯೋಜನೆಗಳನ್ನು ನೀಡುತ್ತಿದೆ. ಜಲಜೀವನ್ ಮಿಷನ್, ನರೇಗಾ, ಪ್ರಧಾನ ಮಂತ್ರಿ ಗ್ರಾಮ ಸಡಕ್, ಆಯುಷ್ಮಾನ್, ಅವಾಸ್ ಯೋಜನೆ, ರೈತರ ಕ್ರಿಯಾ ಯೋಜನೆ ಹೀಗೆ ಸಮಗ್ರವಾಗಿ ಗ್ರಾಮೀಣ ಭಾಗದ ಪ್ರಗತಿಗೆ ವ್ಯವಸ್ಥಿತ ಯೋಜನೆ ರೂಪಿಸಲಾಗುತ್ತಿದೆ. ಎಲ್ಲಾ ಕೆಲಸಗಳು ಗ್ರಾಮ ಮಟ್ಟದಿಂದಲೇ ಜನರಿಗೆ ಸಿಗಬೇಕು. ಅಂತಹ ವಾತಾವರಣ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸಚಿವ ಅಶ್ವತ್ ನಾರಾಯಣ್ ಹೇಳಿಕೆ ನೀಡಿದರು.

Edited By : Manjunath H D
Kshetra Samachara

Kshetra Samachara

27/11/2020 06:30 pm

Cinque Terre

24.87 K

Cinque Terre

3

ಸಂಬಂಧಿತ ಸುದ್ದಿ