ಉಡುಪಿ: ಯೋಗೀಶ್ವರ್ ಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಉಡುಪಿಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್ ಯೋಗೀಶ್ ಪರ ಬ್ಯಾಟಿಂಗ್ ಮಾಡಿದ್ದಾರೆ.ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋ ಒತ್ತಾಯ ಇದೆ ಎಂದು ಹೇಳಿರುವ ಡಿಸಿಎಂ,
ಅವರು ಬಹಳಷ್ಟು ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ್ದಾರೆ.ಅವರಿಗೂ ಸಚಿವ ಸ್ಥಾನದ ಅಪೇಕ್ಷೆ ಇದೆ.ಅವರಿಗೆ ಸಚಿವ ಸ್ಥಾನ ಸಿಗಲಿ ಅನ್ನೋದು ನಮ್ಮ ಅಭಿಪ್ರಾಯ ಇದೆ ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ,ಕೇಂದ್ರದ ವರಿಷ್ಟರು ಮತ್ತು ಸಿಎಂ ಸಮಾಲೋಚನೆ ಮಾಡ್ತಾರೆ.
ಸಂಪುಟ ವಿಸ್ತರಣೆ ಸಾಕಷ್ಟು ಗಮನಸೆಳೆದಿದೆ.ವಿಸ್ತರಣೆ ಒಂದು ಜಟಿಲ ವಿಚಾರ, ಅಲ್ಪಾವಧಿಯಲ್ಲಿ ಎಲ್ಲಾ ಗೊತ್ತಾಗುತ್ತೆ.ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತೆ.ವಲಸೆ ಬಂದವರೂ ಸರ್ಕಾರ ರಚನೆಗೆ ಕಾರಣೀಕರ್ತರಿದ್ದಾರೆ.ಎಲ್ಲರನ್ನೂ ಕುಟುಂಬದ ರೀತಿ ಜೋಡಿಸಿಕೊಂಡು ಹೋಗಬೇಕಾಗುತ್ತೆ.ಬಿಜೆಪಿ ಯಲ್ಲಿದ್ದಾಗ ಎಲ್ಲರೂ ಒಂದೇ. ಒಳಗೆ ಹೊರಗೆ ಅನ್ನೋ ಭಾವನೆ ಸರಿಯಲ್ಲ.ತಾರತಮ್ಯಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ಲಿಂಗಾಯತರಿಗೆ ಒಬಿಸಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು,ಈ ಬಗ್ಗೆ ನನಗೆ ಹೆಚ್ಚು ಮಾಹಿತಿಇಲ್ಲ .ನಿನ್ನೆಯಷ್ಟೇ ಸಬ್ಜೆಕ್ಟ್ ಬಂದಿದೆ.ಇವತ್ತು ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿರುತ್ತೆ.ನಾನು ಗ್ರಾಮ ಸ್ಚರಾಜ್ ಸಮಾವೇಶ ಪ್ರವಾಸದಲ್ಲಿದ್ದೇನೆ.ಎಲ್ಲರ ಭಾವನೆ ಅವಶ್ಯಕತೆಗಳನ್ನ ವೈಜ್ಞಾನಿಕವಾಗಿ ಗಮನಿಸಿ ನಿರ್ಧಾರವಾಗುತ್ತೆ.ಯಾರ್ಯಾರಿಗೆ ಏನೇನು ಸಲ್ಲಬೇಕು ಅದನ್ನು ಸಲ್ಲಿಸುವ ಕೆಲಸ ಸರ್ಕಾರ ಮಾಡುತ್ತೆ ಎಂದು ಹೇಳಿದರು.
Kshetra Samachara
27/11/2020 02:40 pm