ಉಡುಪಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ.ಕೇಂದ್ರದ ನಾಯಕರ ಜೊತೆಗೆ ಚರ್ಚಿಸಿ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ.ಸಮಯ ಬಂದಾಗ ವಿಸ್ತರಣೆ ಮಾಡುತ್ತಾರೆ ಎಂದು ಬಹಳ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು,ದಿಲ್ಲಿಗೆ ಕೇಂದ್ರದ ಅನುದಾನ ತರುವುದಕ್ಕೆ ಮಂತ್ರಿಗಳು ಹೋಗುತ್ತಾರೆ.ಹೋದಾಗ ಕೇಂದ್ರ ನಾಯಕರ ಭೇಟಿ ಆಗುವುದು ಸಹಜ ಎಂದು ಮಂತ್ರಿಗಳು ಸಚಿವ ಸ್ಥಾನಕ್ಕೆ ಲಾಬಿ ಮಾಡಲು ದೆಹಲಿಗೆ ಹೋಗಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಮಂಗಳೂರಿನಲ್ಲಿ ಉಗ್ರ ಸಂಘಟನೆಯನ್ನು ಬೆಂಬಲಿಸುವ ಗೋಡೆ ಬರಹ ವಿಚಾರವಾಗಿ ಮಾತನಾಡಿದ ಅವರು,ರಾಷ್ಟ್ರ ವಿರೋಧಿ ಘೋಷಣೆ ಯಾರೇ ಹಾಕಿದ್ರು, ಕಠಿಣ ಕ್ರಮ ತೆಗೆದುಕೊಳ್ಳುಬೇಕು.ಅದನ್ನು ನಮ್ಮ ಸರಕಾರ ತೆಗೆದುಕೊಳ್ಳುತ್ತೆ ಎಂದರು.
ದೇಶದ ಬೇರೆ ಬೇರೆ ಕಡೆಗಳಲ್ಲಿ ಲವ್ ಜಿಯಾದ್ ಸುದ್ದಿಯಾಗುತ್ತಿದೆ.ಈಗಾಗಲೇ ಪಾರ್ಟಿ, ಕೋರ್ಟ್ ಕಮಿಟಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ, ಸಿಎಂ ಒಪ್ಪಿಗೆ ನೀಡಿದ್ದಾರೆ.ಕರ್ನಾಟಕದಲ್ಲೂ ಲವ್ ಜಿಯಾದ್ ಬಗ್ಗೆ ಕಠಿಣ ಕ್ರಮ ಸರಕಾರ ತೆಗೆದುಕೊಳ್ಳುತ್ತೆ ಎಂದು ಹೇಳಿದರು.
Kshetra Samachara
27/11/2020 01:30 pm